
ವಾರ್ಡ್ ನಂ.61 ರಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ…ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ…
- TV10 Kannada Exclusive
- February 17, 2025
- No Comment
- 52
ಮೈಸೂರು,ಫೆ17,Tv10 ಕನ್ನಡ
ವಿದ್ಯಾರಣ್ಯಪುರಂ ನ ವಾರ್ಡ್ ನಂ.61 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಪಾದಯಾತ್ರೆ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ಬಗೆ ಹರಿಸಲು ಮುಂದಾದರು.ಪಾರ್ಕ್ ನ ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸುವಂತೆ ಮನವಿ ಮಾಡಿದರು. ಪಾರ್ಕಿನ ಸುತ್ತ ಗಿಡಗಳನ್ನು ಹಾಕಿಸಿಕೊಡುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿರುವುದು, ರಾತ್ರಿಯ ಸಮಯದಲ್ಲಿ ಪುಂಡ ಹುಡುಗರುಗಳು ಮಧ್ಯಪಾನ ಮಾಡುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರು.ನಗರಪಾಲಿಕೆಯ ವತಿಯಿಂದ ನಿರ್ಮಿಸಲಾದ ಮಳಿಗೆಗಳು ಶಿಥಿಲವಾಗಿದ್ದು ಯಾವುದೇ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿದೆ.ಈ ಸ್ಥಳಗಳಲ್ಲಿ ಪುಂಡ ಯುವಕರಗಳು ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರಿದರು. ಪಾದಯಾತ್ರೆ ವೇಳೆ ಸಾಥ್ ನೀಡಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಪಾದಯಾತ್ರೆ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ,ಇಂಜಿನಿಯರ್ ಚೇತನ್,ಅರೋಗ್ಯಾಧಿಕಾರಿ ಶಿವಪ್ರಸಾದ್,ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ ಉಸ್ತುವಾರಿ ಜೋಗಿಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್,ಶಿವಲಿಂಗ ಸ್ವಾಮಿ,ಕಿಶೋರ್ ,ವಾಸು,ಶ್ರೀಧರ್ ಭಟ್,ಮಹದೇವ್,ಮಂಗಳ,ಮಹದೇವಣ್ಣ,ಕಿಶೋರ್, ಪ್ರದೀಪ್,ಮುಂತಾದವರು ಇದ್ದರು…