ಐಪಿಎಲ್ ಬೆಟ್ಟಿಂಗ್ ಎಫೆಕ್ಟ್…ತಂಗಿಗೆ ಸಾಲದ ಹೊರೆ…ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣು…ಪ್ರಕರಣ ದಾಖಲಾಗುತ್ತಿದ್ದಂತೆಯೇ ಮತ್ತೊಬ್ಬ ಅಣ್ಣ ಅತ್ತಿಗೆ ಆತ್ಮಹತ್ಯೆ…ಸಾಲದ ಉರುಳಿಗೆ ಮೂವರು ಬಲಿ…

ಐಪಿಎಲ್ ಬೆಟ್ಟಿಂಗ್ ಎಫೆಕ್ಟ್…ತಂಗಿಗೆ ಸಾಲದ ಹೊರೆ…ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣು…ಪ್ರಕರಣ ದಾಖಲಾಗುತ್ತಿದ್ದಂತೆಯೇ ಮತ್ತೊಬ್ಬ ಅಣ್ಣ ಅತ್ತಿಗೆ ಆತ್ಮಹತ್ಯೆ…ಸಾಲದ ಉರುಳಿಗೆ ಮೂವರು ಬಲಿ…

ಮೈಸೂರು,ಫೆ18,Tv10 ಕನ್ನಡ

ಐಪಿಎಲ್ ಬೆಟ್ಟಿಂಗ್ ಹಿನ್ನಲೆ ತಂಗಿಗೆ ಸ್ವಂತ ಅಣ್ಣ ಹಾಗೂ ಅತ್ತಿಗೆ ಮಾಡಿಸಿದ ಸಾಲ ಇಂದು ಒಂದೇ ಕುಟುಂಬದ ಮೂವರ ಸಾವಿಗೆ ಕಾರಣವಾಗಿದೆ.ತಂಗಿ ಮೇಲಿದ್ದ ಸಾಲದ ಕಿರುಕುಳಕ್ಕೆ ಬೇಸತ್ತ ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣಾದ ಬೆನ್ನ ಹಿಂದೆಯೇ ಪ್ರಕರಣ ದಾಖಲಾದ ಹಿನ್ನಲೆ ಮತ್ತೊಬ್ಬ ಅಣ್ಣ ಹಾಗೂ ಅತ್ತಿಗೆ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಭಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.17 ರಂದು ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ತನ್ನ ತಮ್ಮ ಹಾಗೂ ಆತನ ಪತ್ನಿ ವಿರುದ್ದ ಆರೋಪ ಮಾಡಿ ರಮ್ಮನಹಳ್ಳಿ ಸ್ಮಶಾನದ ಬಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪ ಹೊತ್ತ ಮತ್ತೊಬ್ಬ ಅಣ್ಣ ಹಾಗೂ ಪತ್ನಿ ವಾಟರ್ ಟ್ಯಾಂಕ್ ಗೆ ಅಳವಡಿಸಿದ ಮೆಟ್ಟಿಲುಗಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೋಷಿ ಆಂಟೋನಿ(46) ರಮ್ಮನಹಳ್ಳಿಯಲ್ಲಿ ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದವರು.ಇವರ ತಮ್ಮ ಜೋಬಿ ಆಂಟೋನಿ ಹಾಗೂ ಪತ್ನಿ ಶರ್ಮಿಳಾ.@.ಸ್ವಾತಿ ವಿಜಯನಗರ ವಾಟರ್ ಟ್ಯಾಂಕ್ ಬಳಿ ನೇಣಿಗೆ ಶರಣಾದವರು.ಸಾಲದ ವಿಚಾರದಲ್ಲಿ ಶುರುವಾದ ವಿವಾದ ಒಂದೇ ಕುಟುಂಬದ ಮೂವರನ್ನ ಬಲಿ ಪಡೆದಿದೆ.

ಮೇರಿಷಿಲಿನ್ ಗೆ ಇಬ್ಬರು ಅಣ್ಣಂದಿರು.ಓರ್ವ ಜೋಷಿ ಆಂಟೋನಿ ಹಾಗೂ ಮತ್ತೊಬ್ಬ ಜೋಬಿ ಆಂಟೋನಿ.ಜೋಬಿ ಆಂಟೋನಿ ತನ್ನ ತಂಗಿ ಮೇರಿಷಿಯಸ್ ಗೆ ಲಕ್ಷಾಂತರ ರೂ ಸಾಲ ಮಾಡಿಸಿದ್ದಾನೆ.ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಜೋಬಿ ಆಂಟೋನಿ ತಂಗಿ ಹೆಸರಲ್ಲಿ ಹಣ ಕಳೆದಿದ್ದಾನೆ.ಇದಕ್ಕೆ ಜೋಬಿ ಆಂಟೋನಿ ಪತ್ನಿ ಶರ್ಮಿಳಾ.ಆ.ಸ್ವಾತಿ ಕುಮ್ಮಕ್ಕು ಇದೆ.ಲಕ್ಷಾಂತರ ಸಾಲ ನೀಡಿದ ಜನ ಮೇರಿಷಿಯಸ್ ಗೆ ದುಂಬಾಲು ಬಿದ್ದಿದ್ದಾರೆ.ಸಾಲ ತೀರಿಸಲಾಗದೆ ಮೇರಿಷಿಯಸ್ ಒತ್ತಡಕ್ಕೆ ಬಿದ್ದಿದ್ದಾರೆ.ತಂಗಿಗೆ ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆಯೇ ಬೇಸತ್ತ ಮತ್ತೊಬ್ಬ ಅಣ್ಣ ಜೋಷಿ ಆಂಟೋನಿ ನೊಂದಿದ್ದಾರೆ.ತಂಗಿಗೆ ಬಂದ ಸ್ಥಿತಿಗೆ ಮರುಗಿದ ಜೋಷಿ ಆಂಟೋನಿ ಫೆ.17 ರಂದು ರಮ್ಮನಹಳ್ಳಿ ಸ್ಮಶಾನದ ಬಳಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸೆಲ್ಫೀ ವಿಡಿಯೋ ಮಾಡಿ ತನ್ನ ತಂಗಿಯ ಪರಿಸ್ಥಿತಿಗೆ ನನ್ನ ತಮ್ಮ ಜೋಬಿ ಆಂಟೋನಿ ಹಾಗೂ ಆತ್ಮ ಪತ್ನಿ ಶರ್ಮಿಳಾ.ಆ.ಸ್ವಾತಿ ಕಾರಣ ಇವರನ್ನ ಸುಮ್ಮನೆ ಬಿಡಬೇಡಿ ಎಂದು ಕಣ್ಣೀರಿಡುತ್ತಾ ಸೆಲ್ಫೀ ಮಾಡಿ ವಿಡಿಯೋವನ್ನ ತಂಗಿ ಮಗಳ ಮೊಬೈಲ್ ಗೆ ಸೆಂಡ್ ಮಾಡಿ ನೇಣಿಗೆ ಶರಣಾಗಿದ್ದಾರೆ.ತಂದೆ ತಾಯಿಯನ್ನ ದಫನ್ ಮಾಡಿದ ಸ್ಥಳದಲ್ಲೇ ಜೋಷಿ ಆಂಟೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಭಂಧ ಮೇರಿಷಿಯಸ್ ರವರು ಮತ್ತೊಬ್ಬ ಅಣ್ಣ ಜೋಬಿ ಆಂಟೋನಿ ಮತ್ತು ಅತ್ತಿಗೆ ಶರ್ಮಿಳಾ.ಆ.ಸ್ವಾತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಮಾಹಿತಿ ಅರಿತ ಅಣ್ಣ ಜೋಬಿ ಆಂಟೋನಿ ಹಾಗೂ ಪತ್ನಿ ಶರ್ಮಿಳಾ.ಆ.ಸ್ವಾತಿ ವಿಜಯನಗರ ವಾಟರ್ ಟ್ಯಾಂಕ್ ಮೆಟ್ಟಿಲುಗಳಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಐಪಿಎಲ್ ಬೆಟ್ಟಿಂಗ್ ದಂಧೆ ಹಿನ್ನಲೆ ಮಾಡಿದ ಸಾಲ ಇಂದು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣವಾಗಿದೆ.

Spread the love

Related post

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ… ಬೆಂಗಳೂರು,ಜ22,Tv10 ಕನ್ನಡ ಮುಡಾ ಮಾಜಿ ಆಯುಕ್ತ GT ದಿನೇಶ್…
ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ… ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ…
ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…

Leave a Reply

Your email address will not be published. Required fields are marked *