
ದರೋಡೆಗೆ ಹೊಂಚು…ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ…
- TV10 Kannada Exclusive
- February 19, 2025
- No Comment
- 285
ಪಿರಿಯಾಪಟ್ಟಣ,ಫೆ19,Tv10 ಕನ್ನಡ
ದರೋಡೆ ಮಾಡಲು ಹೊಂಚು ಹಾಕುತ್ತಿರುವ ಖತರ್ನಾಕ್ ಕಳ್ಳರ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿ ಕ್ಯಾಮೆರಾವನ್ನು ಕಿತ್ತುಹಾಕಿ ಪ್ಲಾನ್ ಮಾಡುತ್ತಿರುವ ಮುಸುಕುಧಾರಿಗಳ ದೃಶ್ಯ ಸೆರೆಯಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಫಸ್ಟ್ ಕ್ಯಾಂಪ್ ರಸ್ತೆಯಲ್ಲಿ ಘಟನೆ ನಡೆದಿದೆ.
ಸುರೇಶ್ ಎಂಬುವರ ಮನೆ ಬಳಿ ಸಂಚು ರೂಪಿಸುತ್ತಿದ್ದಾಗ
ಪಕ್ಕದ ಮನೆಯವರು ಎಚ್ಚೆತ್ತು ಲೈಟ್ ಆನ್ ಮಾಡಿದ ಕಾರಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದರೋಡೆಕೋರರ ಸಂಚಿನ ಬಗ್ಗೆ
ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದುಷ್ಕರ್ಮಿಗಳ ಬೇಟೆಗೆ ಪೊಲೀಸ್ ತಂಡ ಸಜ್ಜಾಗಿದೆ…