ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ ಗುಳುಂ…ವರದಿ ಸಲ್ಲಿಸುವಂತೆ ಆಡಳಿತ ಮಂಡಳಿಗೆ ನೋಟೀಸ್…

ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ ಗುಳುಂ…ವರದಿ ಸಲ್ಲಿಸುವಂತೆ ಆಡಳಿತ ಮಂಡಳಿಗೆ ನೋಟೀಸ್…

ನಂಜನಗೂಡು,ಫೆ19,Tv10 ಕನ್ನಡ

ನಂಜನಗೂಡು ತಾಲೂಕು ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಸೇರಿ ನಡೆಸಿದ ಅವ್ಯವಹಾರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.12,35,916/- ರೂ ಅವ್ಯವಹಾರ ನಡೆದಿರುವುದು ಪರಿಶೀಲನೆಯಲ್ಲಿ ಖಚಿತವಾದ ಹಿನ್ನಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮನೋಜ್ ಕುಮಾರ್ ರವರು ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೋಟೀಸ್ ನೀಡಿ ಮುಖ್ಯ ಕಾರ್ಯನಿರ್ವಾಹಕರು ನಡೆಸಿದ ಅವ್ಯವಹಾರಗಳ ಬಗ್ಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಿಬ್ಬಂದಿಗಳು ಸೇರಿ ಉತ್ಪಾದಕರಿಂದ ಶೇಖರಿಸಿದ ಹಾಲಿಗೆ ನೀರು ಹಾಗೂ ಇತರ ಸಾಮಗ್ರಿಗಳನ್ನ ಮಿಶ್ರಣ ಒಕ್ಕೂಟಕ್ಕೆ ಸರಬರಾಜು ಮಾಡಿದ್ದಾರೆ.ಹೈನುಗಾರಿಕೆ ಮಾಡದ ತಮ್ಮ ಸಂಭಂಧಿಕರ ಹೆಸರಿಗೆ ಹೆಚ್ಚುವರಿ ಪ್ರಮಾಣದ ಹಾಲನ್ನ ನಮೂದಿಸಿ ಹಣ ಪಾವತಿ ಮಾಡಿದ್ದಾರೆ.5/- ರೂ ಪ್ರೋತ್ಸಾಹ ಧನ ನೀಡುವಲ್ಲಿ ಭೋಗಸ್ ಕಾರ್ಡ್ ಸೃಷ್ಟಿಸಿದ್ದಾರೆ.ಮುಖ್ಯ ಕಾರ್ಯನಿರ್ವಾಹಕರ 10 ಸಂಭಂಧಿಕರು ಹಾಗೂ ನಿಕಟವರ್ತಿಗಳ ಹೆಸರಲ್ಲಿ ನಕಲಿ ಕಾರ್ಡ್ ಸೃಷ್ಟಿಸಿದ್ದಾರೆ.ಪರಿಶೀಲನೆ ವೇಳೆ 12,35,916/- ರೂ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.ಹಾಲು ಶೇಖರಣೆ ಮಾಡಿರುವ ಖರೀದಿಗೂ ಹಾಗೂ ಬಟವಾಡೆ ಮಾಡಿರುವ ಮೊತ್ತಕ್ಕೂ ವೆತ್ಯಾಸ ಕಂಡುಬಂದಿದೆ.ಸಂಘದ ಆಡಳಿತ ಮಂಡಳಿ ಗಮನಕ್ಕೆ ಬಾರದೆ ಹುರಾ ಹಾಲು ಉತ್ಪಾದಕರ ಸಂಘದಿಂದ 1 ಲಕ್ಷ ಹಣ ಪಾವತಿ ಮಾಡಿರುವುದು ಸಹ ಕಂಡುಬಂದಿದೆ.ಸಂಘದ ಕಂಪ್ಯೂಟರ್ ನಲ್ಲಿರುವ ಬಟವಾಡೆ ಪಟ್ಟಿಗೂ ಬ್ಯಾಂಕ್ ಗೆ ಒದಗಿಸಿರುವ ಬಟವಾಡ ಪಟ್ಟಿಗೂ ವೆತ್ಯಾಸ ಕಂಡು ಬಂದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಪೂರ್ಣ ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *