
ಬಾರ್ ಅಂಡ್ ರೆಸ್ಟೋರೆಂಟ್ ಗೆ ವಂಚಿಸಿದ ಕ್ಯಾಷಿಯರ್…6.70 ಲಕ್ಷಕ್ಕೆ ಉಂಡೆನಾಮ…ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
- TV10 Kannada Exclusive
- February 26, 2025
- No Comment
- 399
ನಂಜನಗೂಡು,ಫೆ26,Tv10 ಕನ್ನಡ
ಬ್ಯಾಂಕ್ ಗೆ ಕಟ್ಟಬೇಕಿದ್ದ ಹಣವನ್ನ ಕ್ಯಾಶಿಯರ್ ಲಪಟಾಯಿಸಿದ ಪ್ರಕರಣ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.6.7 ಲಕ್ಷ ಹೊತ್ತೊಯ್ದ ಕ್ಯಾಷಿಯರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟ್ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ ಪಡೆದು ತೆರಳಿದ್ದಾಗ ವ್ಯಾಪಾರ ವಹಿವಾಟಿನಲ್ಲಿ ಬಂದ ಹಣವನ್ನ ಬ್ಯಾಂಕ್ ಗೆ ಕಟ್ಟುವಂತೆ ಮಹದೇವ್ ಗೆ ತಿಳಿಸಿ ತೆರಳಿದ್ದರು.ರಜೆ ಮುಗಿಸಿ ವಾಪಸ್ ಬಂದಾಗ ವ್ಯಾಪಾರವಾಗಿ ಸಂಗ್ರಹವಾಗಿದ್ದ 6.70 ಲಕ್ಷ ಹಣ ಕ್ಯಾಶಿಯರ್ ಮಹದೇವ್ ಕಟ್ಟದೆ ಕೆಲಸಕ್ಕೂ ಬಾರದೆ ನಾಪತ್ತೆಯಾಗಿದ್ದರು.ಮಹದೇವ್ ರನ್ನ ಪತ್ತೆ ಹಚ್ಚಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಸಮಯಾವಕಾಶ ಪಡೆದಿದ್ದರು.ಹಣ ಹಿಂದಿರುಗಿಸದ ಹಿನ್ನಲೆ ಆನಂದ್ ರವರು ಮಹದೇವ್ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…