
ಪೆರೋಲ್ ನಲ್ಲಿ ಬಿಡುಗಡೆಯಾದ 3 ಖೈದಿಗಳು…ಓರ್ವ ಆತ್ಮಹತ್ಯೆ…ಮತ್ತೊಬ್ಬ ಒರಿಸ್ಸಾದಲ್ಲಿ ಅಂದರ್…ಮತ್ತೊಬ್ಬ ನಾಪತ್ತೆ…
- TV10 Kannada Exclusive
- February 27, 2025
- No Comment
- 283
ಮೈಸೂರು,ಫೆ27,Tv10 ಕನ್ನಡ
ಪೆರೋಲ್ ನಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಮೂವರು ಖೈದಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಒರಿಸ್ಸಾದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನವಾದರೆ ಮತ್ತೊಬ್ಬ ನಾಪತ್ತೆಯಾಗಿದ್ದಾನೆ.ಈ ಸಂಭಂಧ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಸಜಾ ಖೈದಿಯಾಗಿದ್ದ ಹಾಸನ ಮೂಲದ ನವೀನ್ 60 ದಿನಗಳ ಅವಧಿಗೆ ಪೆರೋಲ್ ನಲ್ಲಿ ತೆರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮತ್ತೊಬ್ಬ ಒರಿಸ್ಸಾ ರಾಜ್ಯದ ಸುನಿಲ್ ಬೀರಾ ಪೆರೋಲ್ ನಲ್ಲಿ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದಾನೆ.ಮತ್ತೊಬ್ಬ ಖೈದಿ ವೆಂಕಣ್ಣ ಆಂದ್ರ ರಾಜ್ಯದ ವಿಶಾಖಪಟ್ಟಣ ನಿವಾಸಿ ವೆಂಕಣ್ಣ ಪೆರೋಲ್ ನಲ್ಲಿ ಬಿಡುಗಡೆಯಾಗಿ ತೆರಳಿದ ನಂತರ ಒರಿಸ್ಸಾನಲ್ಲಿ ಗಾಂಜಾ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ಹಾಸನದ ನವೀನ್ ಡಿಸೆಂಬರ್ 6 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಸ್ವಗ್ರಾಮ ಹಲಸನಹಳ್ಳಿಗೆ ತೆರಳಿದ್ದಾನೆ.ಫೆ2 ರಂದು ಅವಧಿ ಮುಗಿದು ಶರಣಾಗಬೇಕಿತ್ತು.ಆದ್ರೆ ನವೀನ್ ಈ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒರಿಸ್ಸಾ ಮೂಲದ ಸುನಿಲ್ ಬೀರಾ ಡಿ.12 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಪೆರೋಲ್ ಮೇಲೆ ತೆರಳಿದ್ದಾನೆ.ನಿಗದಿತ ಸಮಯಕ್ಕೆ ಶರಣಾಗದೆ ನಾಪತ್ತೆಯಾಗಿದ್ದಾನೆ.
ಆಂಧ್ರ ರಾಜ್ಯ ವಿಶಾಖಪಟ್ಟಣದ ವೆಂಕಣ್ಣ ಡಿಸೆಂಬರ್ ನಲ್ಲಿ ತೆರಳಿದವರು ನಿಗದಿತ ಸಮಯಕ್ಕೆ ಹಿಂದಿರುಗಿ ಶರಣಾಗಿಲ್ಲ.ಈತ ಒರಿಸ್ಸಾದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿ ಜೈಲುವಾಸಿಯಾಗಿದ್ದಾನೆ.
ವೆಂಕಣ್ಣ ಪ್ರಕರಣದಲ್ಲಿ ಒರಿಸ್ಸಾ ನ್ಯಾಯಾಲಯ ಜಾಮೀನು ನೀಡಿದ ನಂತರ ಮೈಸೂರು ಪೊಲೀಸರು ವಶಕ್ಕೆ ಪಡೆಯಬೇಕಿದೆ.ಸುನಿಲ್ ಬೀರಾ ಪ್ರಕರಣದಲ್ಲಿ ನಾಪತ್ತೆಯಾದವನನ್ನ ಹುಡುಕಬೇಕಿದೆ.ನವೀನ್ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.ಒಟ್ಟಾರೆ ಪೆರೋಲ್ ನಲ್ಲಿ ತೆರಳಿದ ಖೈದಿಗಳು ಮೈಸೂರಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ…