
ರಾಜ್ಯದಲ್ಲೂ ಶಿಂಧೆ ಮೇನಿಯಾ ಶುರುವಾಗಲಿದೆ…ಡಿಕೆಶಿ ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ ಮಾಜಿ ಸಚಿವ ಶ್ರೀರಾಮುಲು…
- TV10 Kannada Exclusive
- February 28, 2025
- No Comment
- 124
ಮೈಸೂರು,ಫೆ28,Tv10 ಕನ್ನಡ
ಡೆಪ್ಯೂಟಿ ಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ತೊರೆಯುವ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಮೈಸೂರಿನಲ್ಲಿ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ರಾಜಕಾರಣ ನಿಂತ ನೀರಲ್ಲ ಹರಿಯುತ್ತಿರುವ ನೀರಿನಂತೆ.ಕೆಲ ಕ್ಷಿಪ್ರ ಬೆಳವಣಿಗೆಗಳನ್ನ ರಾಜಕಾರಣದಲ್ಲಿ ನೋಡುತ್ತೇವೆ.
ವೀರೇಂದ್ರ ಪಾಟೀಲ್ ರನ್ನ ಯಾವ ರೀತಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ನೋಡಿದ್ದೀವಿ.
ಅರಸು ರನ್ನ ಇಳಿಸಿದ್ದನ್ನು ಕಂಡಿದ್ದೇವೆ.
ಆ ರೀತಿಯ ಬೆಳವಣಿಗೆ ರಾಜ್ಯದಲ್ಲೂ ಆಗುವ ಲಕ್ಷಣಗಳಿವೆ.
ಕರ್ನಾಟದಲ್ಲೂ ಇನ್ನೊಂದು ಶಿಂಧೆ ಮೇನಿಯ ಆಗುತ್ತದೆ.
ಮಹಾರಾಷ್ಟ್ರದಲ್ಲಿ ಶಿಂದೆ ಮೇನಿಯ ಯಾವ ರೀತಿ ಆಯ್ತು ಅದೇ ರೀತಿ ಇಲ್ಲೂ ಆಗಲಿದೆ.
ಆಡಳಿತ ಪಕ್ಷದಲ್ಲಿ ಯಾರು ಶಿಂಧೆ ಆಗ್ತಾರೆ ಅನ್ನೋದನ್ನ ಕಾದು ನೋಡಿ.ಕರ್ನಾಟದ ಏಕನಾಥ ಶಿಂದೆಗೆ ಬೆಂಬಲ ನೀಡುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು
ಮೈಸೂರಿನಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ…