
RBI ನಲ್ಲಿ ಚಿರತೆ ಸೆರೆ…20 ದಿನಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿ…
- TV10 Kannada Exclusive
- February 28, 2025
- No Comment
- 131


ಮೈಸೂರು,ಫೆ28,Tv10 ಕನ್ನಡ

ಇನ್ಫೋಸಿಸ್ ನಲ್ಲಿ ಚಿರತೆ ಭೀತಿ ಮಾಸುವ ಮುನ್ನ ನೋಟು ಮುದ್ರಣಾಲಯದಲ್ಲಿ ಸೆರೆ ಸಿಕ್ಕಿದೆ.20 ದಿನಗಳ ಕಾಲ ನಡೆದಿದ ಕಾರ್ಯಾಚರಣೆ ಯಶಸ್ವಿಯಾಗಿದೆ.RBI ಆವರಣದಲ್ಲಿ ಚಿರತೆ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಮ್ಯಾನೇಜ್ ಮೆಂಟ್ ನವರು ಅರಣ್ಯ ಇಲಾಖೆಗೆ ದೂರು ನೀಡಿ ಸೆರೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು.20 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.ನಾಲ್ಕು ಸ್ಥಳಗಳಲ್ಲಿ ಬೋನು ಇರಿಸಲಾಗಿತ್ತು.ವಲಯ ಅರಣ್ಯಾಧಿಕಾರಿಗಳು,ಉಪ ವಲಯ ಅರಣ್ಯಾಧಿಕಾರಿಗಳು,ವನಪಾಲಕರು ಹಾಗೂ ಚಿರತೆ ಸಹಾಯಕ ಕಾರ್ಯಪಡೆ ಒಳಗೊಂಡಂತೆ 30 ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ನೋಟು ಮುದ್ರಣಾಲಯದ ಹೊರಭಾಗದಲ್ಲಿ ಇರಿಸಲಾಗಿದ್ದ ಬೋನಿಗೆ ಇಂದು ಮುಂಜಾನೆ ಗಂಡು ಚಿರತೆ ಸೆರೆ ಸಿಕ್ಕಿದೆ.ಸೆರೆಯಾದ ಚಿರತೆಯನ್ನ ಸುರಕ್ಷಿತವಾಗಿ ಅರಣ್ಯ ಭವನಕ್ಕೆ ಸಾಗಿಸಿ ಪಶುವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ…