
ಲವ್ ಮ್ಯಾಟರ್…ಹಳೆ ಲವರ್ ನಿಂದ ಹೊಸ ಲವರ್ ಕಿಡ್ನಾಪ್…ನನ್ ಹುಡುಗಿ ಸಹವಾಸಕ್ಕೆ ಬರಬೇಡ ಹುಷಾರ್…ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಟಾರ್ಚರ್…5 ಮಂದಿ ವಿರುದ್ದ FIR…
- TV10 Kannada Exclusive
- March 1, 2025
- No Comment
- 170
ಮೈಸೂರು,ಮಾ1,Tv10 ಕನ್ನಡ
ಹುಡುಗಿ ಲವ್ ವಿಚಾರದಲ್ಲಿ ಹಳೇ ಲವರ್ ಹೊಸ ಲವರ್ ನ ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ ಬಂಧಿಸಿಟ್ಟು ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿ ಬಿಡುಗಡೆ ಮಾಡಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಹಲ್ಲೆಗೊಳಗಾದ ಯುವತಿಯ ಹೊಸ ಲವರ್ ಹಳೇ ಲವರ್ ಸೇರಿದಂತೆ 5 ಮಂದಿ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.
ಗೋಕುಲಂ ನ ಖಾಸಗಿ ಬಿಪಿಓ ಕಂಪನಿಯಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿರುವ ಅಭಿನಂದ್ ಹಲ್ಲೆಗೆ ಒಳಗಾದ ಯುವತಿ ಹೊಸಲವರ್.ಹಲ್ಲೆ ನಡೆಸಿದ ಹಳೆ ಲವರ್ ನಿಜಾಂ ಸೇರಿದಂತೆ ಸ್ನೇಹಿತರಾದ ಶಾಹಿನ್,ಶಲ್ವಿನ್,ಶಾನ್ ಹಾಗೂ ಮತ್ತೊಬ್ಬನ ವಿರುದ್ದ ಪ್ರಕರಣ ದಾಖಲಾಗಿದೆ.
ಅಭಿನಂದ್ ಹಾಗೂ ದಿಲ್ ಶಾನಾ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪರಸ್ಪರ ಪ್ರೀತಿಸುತ್ತಿದ್ದರು.ಈ ಹಿಂದೆ ದಿಲ್ ಶಾನಾ ಳನ್ನ ನಿಜಾಂ ಪ್ರೀತಿಸುತ್ತಿದ್ದ.ದಿಲ್ ಶಾನಾ ಜೊತೆ ಅಭಿನಂದ್ ಓಡಾಡುತ್ತಿದ್ದುದು ನಿಜಾಂಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.ಫೆ26 ರಂದು ಅಭಿನಂದ್ ಗೆ ನಿಜಾಂ ಫೋನ್ ಮಾಡಿ ಮಾತನಾಡಬೇಕೆಂದು ತಿಳಿಸಿದ್ದಾನೆ.ದಿಲ್ ಶಾನಾ ಗೆ ಈ ವಿಚಾರ ತಿಳಿಸಿ ಅಭಿನಂದ್ ಹೊರಟಿದ್ದಾನೆ.ಕಾಫಿ ಕುಡಿಯೋಣ ಎಂದು ನೆಪ ಒಡ್ಡಿ ನಿಜಾಂ ಬೈಕ್ ಹತ್ತಿಸಿಕೊಂಡಿದ್ದಾನೆ.ತಕ್ಷಣವೇ ಹಿಂದೆ ಶಾಹಿನ್ ಕುಳಿತು ಅಲುಗಾಡದಂತೆ ಹಿಡಿದು ಮೊಬೈಲ್ ಕಿತ್ತುಕೊಂಡು ಸ್ವಿಚ್ ಆಫ್ ಮಾಡಿ ಬಲವಂತವಾಗಿ ಬನ್ನೂರು ರಸ್ತೆಯಲ್ಲಿರುವ ದೇವೇಗೌಡ ಸರ್ಕಲ್ ಬಳಿಗೆ ಕರೆದೊಯ್ದು ತಮ್ಮ ರೂಮಿನಲ್ಲಿ ಅಕ್ರಮವಾಗಿ ಬಂಧಿಸಿದ್ದಾರೆ.ಅಲ್ಲಿಗೆ ಶೆಲ್ವಿನ್,ಶಾನ್ ಹಾಗೂ ಮತ್ತೊಬ್ಬ ಬಂದಿದ್ದಾರೆ.ದಿಲ್ ಶಾನಾ ಸಹವಾಸ ಬಿಡು,ಆಕೆ ಜೊತೆ ಓಡಾಡಬಾರದೆಂದು ಬೆದರಿಕೆ ಹಾಕಿ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ.ಹಿಗ್ಗಾಮುಗ್ಗ ಥಳಿಸಿದ್ದಾರೆ.ಎಷ್ಟು ಹೊತ್ತು ಆದ್ರೂ ಅಭಿನಂದ್ ಹಿಂದಿರುಗದ ಕಾರಣ ದಿಲ್ ಶಾನಾ ತನ್ನ ಸ್ನೇಹಿತರಾದ ಅಪರ್ಣ ಹಾಗೂ ಅಕ್ಷಯಾ ರಿಗೆ ತಿಳಿಸಿ ನಿಜಾಂ ರೂಂ ಬಳಿ ಪರುಶೀಲನೆ ಮಾಡುವಂತೆ ಹೇಳಿದ್ದಾಳೆ.ಅಪರ್ಣ ಹಾಗೂ ಅಕ್ಷಯ ಇಬ್ಬರೂ ನಿಜಾಂ ರೂಂ ಗೆ ಬಂದಾಗ ಇಬ್ಬರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.ಸುಮಾರು ಮೂರು ಗಂಟೆಗಳ ಕಾಲ ಅಭಿನಂದ್ ನನ್ನು ಅಕ್ರಮವಾಗಿ ಬಂಧಿಸಿ ಟಾರ್ಚರ್ ಕೊಟ್ಟು ಪೊಲೀಸರಿಗೆ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಂತರ ಬಿಡುಗಡೆ ಮಾಡಿದ್ದಾರೆ.ಹಳೇ ಲವರ್ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ಬಂದ ಅಭಿನಂದ್ ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…