
ಮೆದುಳಿನ ರಕ್ತಸ್ರಾವ… ಆಶ್ರಮ ಶಾಲಾ ವಿದ್ಯಾರ್ಥಿ ಸಾವು…
- TV10 Kannada Exclusive
- March 6, 2025
- No Comment
- 22
ಹುಣಸೂರು,ಮಾ6,Tv10 ಕನ್ನಡ
ಮೆದುಳಿನ ರಕ್ತಸ್ರಾವದಿಂದ ಹುಣಸೂರಿನ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ನಾಗಾಪುರ ಆಶ್ರಮ ಶಾಲೆ
8 ನೇ ತರಗತಿ ವಿದ್ಯಾರ್ಥಿ ಸೂರ್ಯ (14) ಸಾವನ್ನಪ್ಪಿದ್ದಾನೆ.
ಕಲ್ಲೂರಪ್ಪನ ಬೆಟ್ಟದ ಬಳಿಯ ಶಂಕರಪುರ ಹಾಡಿಯ ಜಗನ್ನಾಥ್ ಹಾಗೂ ಲಕ್ಷ್ಮಿ ದಂಪತಿ ಪುತ್ರ ಸೂರ್ಯ.
ಶಾಲಾ ಆವರಣದಲ್ಲಿ ಮಾ. 4 ರಂದು ವೇಳೆ ತಲೆಸುತ್ತು ಬಂದು ಬಿದಿದ್ದ ಸೂರ್ಯನಿಗೆ
ನಂತರ ವಾಂತಿಯಾಗಿತ್ತು. ಸ್ಥಳದಲ್ಲಿದ್ದ ಶಿಕ್ಷಕರು ಪ್ರಾಥಮಿಕ ಚಿಕಿತ್ಸೆ ನೀಡಿದ್ದರು.ಮತ್ತೆ ಕೆಲ ಹೊತ್ತಿನ ಬಳಿಕ ವಾಂತಿ ಮಾಡಿದ್ದ ಸೂರ್ಯನನ್ನು
ತಕ್ಷಣವೇ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರ ಸಲಹೆಯಂತೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸೂರ್ಯ ಮೃತಪಟ್ಟಿದ್ದಾನೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…