ಅಂಬೇಡ್ಕರ್ ಪಾರ್ಕ್ ವಿಚಾರಕ್ಕೆ ಬಂದ್ರೆ ಕೊಲೆ ಮಾಡ್ತೀವಿ…ಪ್ರೊಫೆಸರ್ ಗೆ ಧಂಕಿ ಹಾಕಿ ಹಲ್ಲೆ ನಡೆಸಿದ ಗುಂಪು…4 ಮಂದಿ ವಿರುದ್ದ FIR…

ಅಂಬೇಡ್ಕರ್ ಪಾರ್ಕ್ ವಿಚಾರಕ್ಕೆ ಬಂದ್ರೆ ಕೊಲೆ ಮಾಡ್ತೀವಿ…ಪ್ರೊಫೆಸರ್ ಗೆ ಧಂಕಿ ಹಾಕಿ ಹಲ್ಲೆ ನಡೆಸಿದ ಗುಂಪು…4 ಮಂದಿ ವಿರುದ್ದ FIR…

ಮೈಸೂರು,ಮಾ6,Tv10 ಕನ್ನಡ

ಅಶೋಕಾಪುರಂ ನ ಅಂಬೇಡ್ಕರ್ ಪಾರ್ಕ್ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಸಿಬ್ಬಂದಿ ಗಮನಕ್ಕೆ ತಂದ ಪ್ರೊಫೆಸರ್ ಮನೆಗೆ ನುಗ್ಗಿದ ಯುವಕರ ಗುಂಪು ಹಿಗ್ಗಾಮುಗ್ಗ ಥಳಿಸಿ ಪಾರ್ಕ್ ತಂಟೆಗೆ ಬಂದ್ರೆ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿದ ಘಟನೆ ಮೈಸೂರಿನ ಅಶೋಕಾಪುರಂ ನಲ್ಲಿ ನಡೆದಿದೆ.ಹಲ್ಲೆಗೊಳಗಾದ ಪ್ರೊಫೆಸರ್ ಪಾರ್ಕ್ ಮೇಂಟೈನನ್ಸ್ ಮಾಡುವ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಡಾ.ಎಂ.ಪಿ.ರಮೇಶ್ ರವರು ಹಲ್ಲೆಗೊಳಗಾದವರು.ಪಾರ್ಕ್ ನಿರ್ವಹಣೆ ಜವಾಬ್ದಾರಿ ಹೊತ್ತ ರಕ್ಷಿತ್ ಆರಾಧ್ಯ,ಜಿತೇಂದ್ರ,ಸಮೃದ್ದಿ ಹಾಗೂ ಶ್ರೇಯಸ್ ಹಲ್ಲೆ ನಡೆಸಿದ ಯುವಕರು.

ರಜೆ ಮೇಲೆ ಮೈಸೂರಿಗೆ ಬಂದಿದ್ದ ಡಾ.ರಮೇಶ್ ರವರು ಉದ್ಯಾನವನದಲ್ಲಿರುವ ಗಿಡಗಳಿಗೆ ನೀರು ಹಾಕಿ ಸ್ವಚ್ಛತೆ ಕಾಪಾಡುವಂತೆ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಕುಮಾರ್ ಎಂಬುವರಿಗೆ ಮನವಿ ಮಾಡಿದ್ದಾರೆ.ಇಷ್ಟಕ್ಕೇ ಪಾರ್ಕ್ ಸ್ವಚ್ಛತೆ ಜವಾಬ್ದಾರಿ ಹೊತ್ತಿದ್ದ ರಕ್ಷಿತ್ ಆರಾಧ್ಯ ತನ್ನ ಸ್ನೇಹಿತರಾದ ಜಿತೇಂದ್ರ,ಸಮೃದ್ದಿ,ಶ್ರೇಯಸ್ ರನ್ನ ಕರೆತಂದು ಅಕ್ರಮವಾಗಿ ರಮೇಶ್ ರವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೊಮ್ಮೆ ಪಾರ್ಕ್ ವಿಚಾರಕ್ಕೆ ಬಂದ್ರೆ ಕೊಲೆ ಮಾಡುವುದಾಗಿ ವಾರ್ನಿಂಗ್ ಕೊಟ್ಟು ಓಡಿದ್ದಾರೆ.ಹಲ್ಲೆಗೊಳಗಾದ ಡಾ.ರಮೇಶ್ ಮೆಡಿಕಲ್ ಮಾಡಿಸಿ ಆಶೋಕಪುರಂ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *