
ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕಿರಿಕ್…ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಇನ್ಸ್ಪೆಕ್ಟರ್ ಸಹೋದರ ಸೇರಿದಂತೆ ಮೂವರ ವಿರುದ್ದ FIR ದಾಖಲು…
- TV10 Kannada Exclusive
- March 7, 2025
- No Comment
- 201

ಹುಣಸೂರು,ಮಾ7,Tv10 ಕನ್ನಡ
ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಕ್ಯಾತೆ ತೆಗೆದ ಇನ್ಸ್ಪೆಕ್ಟರ್ ಸಹೋದರ ವ್ಯಕ್ತಿ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹುಣಸೂರು ತಾಲೂಕು ಬಿಳಿಕೆರೆಯ ಕುಪ್ಪೆ ಗ್ರಾಮದಲ್ಲಿ ನಡೆದಿದೆ.ಕುಪ್ಪೆ ಗ್ರಾಮದ ಚಂದ್ರೇಗೌಡ ಎಂಬುವರು ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರುನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಮಂಜು ಎಂಬುವರ ಸಹೋದರ ರಾಜು,ಇವರ ಪತ್ನಿ ನೇತ್ರಾವತಿ ಹಾಗೂ ಭಾವ ಭಾಸ್ಕರ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಇದೆ.ಚಂದ್ರೇಗೌಡ ರವರು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದ ವೇಳೆ ಪಕ್ಕದ ಮನೆಲ್ಲೇ ವಾಸವಿರುವ ರಿಟೈರ್ಡ್ ಪೊಲೀಸ್ ಆಫೀಸರ್ ಮಾದೇಗೌಡ ತಕರಾರು ಮಾಡಿದ್ದಾರೆ.ಅಲ್ಲದೆ ಇನ್ಸ್ಪೆಕ್ಟರ್ ಮಂಜು ಸಹ ದೂರವಾಣಿಯಲ್ಲಿ ಸಂಪರ್ಕಿಸಿ ಎಚ್ಚರಿಕೆ ನೀಡಿದ್ದಾರೆ.ಇದ್ಯಾವುದನ್ನ ಲೆಕ್ಕಿಸದೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದ ಚಂದ್ರೇಗೌಡ ಮೇಲೆ ಇನ್ಸ್ಪೆಕ್ಟರ್ ಮಂಜು ಸಹೋದರ ರಾಜು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.ರಾಜು ಕೃತ್ಯಕ್ಕೆ ನೇತ್ರಾವತಿ ಹಾಗೂ ಭಾಸ್ಕರ್ ಸಹಕರಿಸಿದ್ದಾರೆ.ತೀವ್ರಗಾಯಗೊಂಡ ಚಂದ್ರೇಗೌಡರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ…