
ಬಾರ್ ಕ್ಯಾಷಿಯರ್ ಗೆ ಆವಾಜ್…ಬಿಯರ್ ಬಾಟಲ್ ಕೇಸ್ ಹೊತ್ತೊಯ್ದ ಪುಂಡರು…ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ…7 ಮಂದಿ ವಿರುದ್ದ FIR ದಾಖಲು…
- TV10 Kannada Exclusive
- March 7, 2025
- No Comment
- 296
ನಂಜನಗೂಡು,ಮಾ7,Tv10 ಕನ್ನಡ
ಮಧ್ಯರಾತ್ರಿ ವೇಳೆ ಕಿಡಿಗೇಡಿ ಯುವಕರ ಗುಂಪೊಂದು ಮುಚ್ಚಿದ್ದ ಬಾರ್ ಬಲವಂತವಾಗಿ ಓಪನ್ ಮಾಡಿಸಿ ಕ್ಯಾಷಿಯರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ಕೇಸ್ ಹೊತ್ತೊಯ್ದ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಕ್ಯಾಷಿಯರ್ ವೆಂಕಟೇಶ್ ರವರು ಕಿಶೋರ್,ಚಂದನ್ ಸೇರಿದಂತೆ 7 ಮಂದಿ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹುಲ್ಲಹಳ್ಳಿಯಲ್ಲಿರುವ ನ್ಯೂ ಕಾರವಾನ್ ಬಾರ್ ನಲ್ಲಿ ಘಟನೆ ನಡೆದಿದೆ.ಮಧ್ಯರಾತ್ರಿ ವೇಳೆ ಬಾರ್ ಕ್ಲೋಸ್ ಮಾಡಿ ಲೆಕ್ಕ ಮಾಡಿಕೊಳ್ಳುತ್ತಿದ್ದ ವೇಳೆ ಕಿಶೋರ್,ಚಂದನ್ ಹಾಗೂ 5 ಮಂದು ಬಂದು ಬಾಗಿಲ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶೆಟರ್ ಓಪನ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ.ಕ್ಯಾಷ್ ಬಾಕ್ಸ್ ಮೇಲೆ ಕುಳಿತು ಧಂಕಿ ಹಾಕುತ್ತಾ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್ ಗಳನ್ನ ಬಾಕ್ಸ್ ಒಂದಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ.ವೆಂಕಟೇಶ್ ರವರು 7 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಕಿಶೋರ್ ಹಾಗೂ ಚಂದನ್ ರನ್ನ ಪೊಲೀಸರು ಬಂಧಿಸಿದ್ದಾರೆ…