
ಬ್ಲೂಬಾಯ್ಸ್ ಮಡಿಲಿಗೆ 2025 ಐಸಿಸಿ ಚಾಂಪಿಯನ್ ಟ್ರೋಫಿ…ಮೈಸೂರಿನಲ್ಲಿ ವಿಜಯೋತ್ಸವ…
- TV10 Kannada Exclusive
- March 9, 2025
- No Comment
- 135
ಮೈಸೂರು,ಮಾ9,Tv10 ಕನ್ನಡ
ಇಂದು ದುಬೈ ನ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನ ಬಗ್ಗುಬಡಿದು ಐಸಿಸಿ ಛಾಂಪಿಯನ್ಸ್ ಆಗಿ ಟ್ರೋಫಿಯನ್ನ ರೋಹಿತ್ ಶರ್ಮ ನೇತೃತ್ವದ ತಂಡ ಮುಡಿಗೇರಿಸಿಕೊಂಡಿದೆ.ಟ್ರೋಫಿಗೆ ಮುತ್ತಿಟ್ಟ ಬ್ಲೂಬಾಯ್ಸ್ ತಂಡಕ್ಕೆ ದೇಶದಾದ್ಯಂತ ಶುಭಾಶಯಗಳ ಸುರಿಮಳೆಯಾಗುತ್ತಿದೆ.ಮೈಸೂರಿನಲ್ಲೂ ಸಹ ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ.ಯುವ ಭಾರತ್ ಸಂಘಟನೆ ವತಿಯಿಂದ ಅಗ್ರಹಾರದ ವೃತದಲ್ಲಿ ಭಾರತದ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಕೂಗುತ್ತಾ, ಸಂಭ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಮಹಾನ್ ಶ್ರೇಯಸ್, ಸುಚೇಂದ್ರ, ಅಮಿತ್ ಕುಮಾರ್, ಚಕ್ರಪಾಣಿ, ಕರಣ್ ಜೈನ್ ಕೆ ಜೆ,ಸುಧೀಂದ್ರ, ನವೀನ್, ವಿಶ್ವನಾಥ್, ಹಾಗೂ ಇನ್ನಿತರ ಕ್ರಿಕೆಟ್ ಪ್ರೇಮಿಗಳು ಹಾಜರಿದ್ದರು…