
ಲವರ್ ವಿಚಾರದಲ್ಲಿ ಪರ್ಸನಲ್ ಆಗಿ ಮಾತನಾಡಬೇಕೆಂದು ಕರೆಸಿ ಪ್ರಿಯತಮನ ಮೇಲೆ ಹಲ್ಲೆ…10 ಮಂದಿ ವಿರುದ್ದ FIR ದಾಖಲು…
- TV10 Kannada Exclusive
- March 10, 2025
- No Comment
- 58
ಮೈಸೂರು,ಮಾ10,Tv10 ಕನ್ನಡ
ಪ್ರೀತಿಸುತ್ತಿರುವ ಯುವತಿಯ ವಿಚಾರ ಮಾತನಾಡಬೇಕೆಂದು ಕರೆಸಿಕೊಂಡ ಯುವಕ ಗುಂಪು ಕಟ್ಟಿಕೊಂಡು ಪ್ರಿಯತಮನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚೇತನ್ ಚಿನ್ನಪ್ಪ ಸೇರಿದಂತೆ 10 ರಿಂದ 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.ಮಂಡ್ಯ ಮೂಲದ ಶಿವಾರ್ಜುನ್ (29) ಹಲ್ಲೆಗೆ ಒಳಗಾದವರಾಗಿದ್ದು ಹಲ್ಲೆ ನಡೆಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.
ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಶಿವಾರ್ಜುನ್ ಮೈಸೂರಿನ ವಿವಿದೆಡೆ ಕಟ್ಟಡ ನಿರ್ಮಾಣ ಕೆಲಸ ಮಾಡಿಸುತ್ತಿದ್ದಾರೆ.ಕಳೆದ 7 ವರ್ಷಗಳಿಂದ ಮೈಸೂರಿನ ಹಿನಕಲ್ ನ ಯುವತಿಯೊಬ್ಬರನ್ನ ಪ್ರೀತಿಸುತ್ತಿದ್ದಾರೆ.ಪ್ರೀತಿಸುತ್ತಿರುವ ಯುವತಿಯ ಪರ್ಸನಲ್ ವಿಚಾರ ಮಾತನಾಡಬೇಕೆಂದು ಚೇತನ್ ಚಿನ್ನಪ್ಪ ನಾಲ್ಕು ದಿನಗಳ ಹಿಂದೆ ಶಿವಾರ್ಜುನ್ ಗೆ ಫೋನ್ ಮಾಡಿ ಕರೆದಿದ್ದಾರೆ.ಪ್ರಿಯತಮೆಯ ವಿಚಾರ ಎಂದು ತಿಳಿದು ಚೇತನ್ ಚಿನ್ನಪ್ಪ ಕರೆದ ಸ್ಥಳಕ್ಕೆ ಶಿವಾರ್ಜುನ್ ಹೋಗಿದ್ದಾರೆ.ವಿಜಯನಗರ ವಾಟರ್ ಟ್ಯಾಂಕ್ ಬಳಿ ಕರೆಸಿಕೊಂಡ ಚೇತನ್ ಚಿನ್ನಪ್ಪ 10 ರಿಂದ 12 ಮಂದಿ ಗ್ಯಾಂಗ್ ಜೊತೆ ಬಂದು ಹಿಗ್ಗಾಮುಗ್ಗ ಥಳಿಸಿದ್ದಾರೆ.ನಂತರ ಪ್ರಿಯತಮೆಗೆ ಫೋನ್ ಮಾಡಿ ಚೇತನ್ ಚಿನ್ನಪ್ಪ ವಿಳಾಸ ತಿಳಿದುಕೊಂಡ ಶಿವಾರ್ಜುನ್ ಮನೆಗೆ ಹೋಗಿ ತಾಯಿ ಬಳಿ ಮಾತನಾಡಿದ್ದಾರೆ.ಈ ವೇಳೆ ಸ್ನೇಹಿತರ ಜೊತೆ ಮನೆಗೆ ಬಂದ ಚೇತನ್ ಚಿನ್ನಪ್ಪ ಧಂಕಿ ಹಾಕಿ ಕಳಿಸಿದ್ದಾನೆ.ಅನಗತ್ಯವಾಗಿ ಹಲ್ಲೆ ನಡೆಸಿದ ಚೇತನ್ ಚಿನ್ನಪ್ಪ ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಾರ್ಜುನ್ ಪ್ರಕರಣ ದಾಖಲಿಸಿದ್ದಾರೆ…