
ಅಕ್ರಮ ಮಧ್ಯ ಮಾರಾಟ ಆರೋಪ…ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿ…ಕ್ರಮ ಕೈಗೊಳ್ಳದೆ ವಾಪಸ್…ಗ್ರಾಮಸ್ಥರ ಅಸಮಾಧಾನ…
- TV10 Kannada Exclusive
- March 10, 2025
- No Comment
- 57


ನಂಜನಗೂಡು,ಮೇ10,Tv10 ಕನ್ನಡ

ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ದೂರು ನೀಡಿದ್ದರೂ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗಿದ ಪ್ರಕರಣ ಬೆಳಕಿಗೆ ಬಂದಿದೆ.ಅಬಕಾರಿ ಅಧಿಕಾರಿ ವರ್ತನೆಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಕೆಲ ದಿನಗಳ ಹಿಂದೆ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದ ಮಹದೇವ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಅಕ್ರಮ ಮಧ್ಯದ ಚಟಕ್ಕೆ ಬಲಿಯಾಗಿದ್ದಾರೆ.
ನಾಗಣಪುರ ಆದಿವಾಸಿ ಕಾಲೋನಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ.
ಬಳ್ಳೂರು ಹುಂಡಿ, ಈರೇಗೌಡನ ಹುಂಡಿ, ಅಂಜನಾಪುರ, ಮಡುವಿನಹಳ್ಳಿ, ಕೊತ್ತನಹಳ್ಳಿ ಆದಿವಾಸಿ ಕಾಲೋನಿ ಇನ್ನು ಅನೇಕ ಗ್ರಾಮಗಳಲ್ಲಿ ಪೆಟ್ಟಿ ಅಂಗಡಿ ಮತ್ತು ಗಿರಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈರೇಗೌಡನ ಹುಂಡಿ, ಅಂಜನಪುರ ,ಗ್ರಾಮಕ್ಕೆ ಪರಿಶೀಲನೆಗೆ ಬಂದ ಅಬಕಾರಿ ಅಧಿಕಾರಿಗೆ ರಾಶಿ ಕುಡಿದು ಬಿಸಾಡಿರುವ ಕಾಲಿ ಪ್ಯಾಕೆಟ್ ಗಳ ದರ್ಶನವಾಗಿದೆ.ಹೀಗಿದ್ದೂ ಪರಿಶೀಲನೆಗೆ ಬಂದ ಅಧಿಕಾರಿ ಅಫ್ಸಲ್ ಯಾವುದೇ ಕ್ರಮ ಕೈಗೊಳ್ಳದೆ ಬರಿಗೈಲಿ ಹಿಂದಿರುಗಿದ್ದಾರೆ.ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೂ ಕ್ಯಾರೆ ಎನ್ನದೆ ಮೌನಕ್ಕೆ ಶರಣಾಗಿದ್ದಾರೆ.
ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಫ್ಸಲ್ ವರ್ತನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸುವ ಸ್ಥಳೀಯರು ಅಕ್ರಮ ಮಧ್ಯ ಮಾರಾಟಕ್ಕೆ ಬ್ರೇಕ್ ಹಾಕುವುದ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ…