
ಸೆಲ್ಫೀ ವಿಡಿಯೋ ಮಾಡಿ ವ್ಯಕ್ತಿ ಸಾವು…ಜಗಳ ಆಡಿದವರ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 10, 2025
- No Comment
- 79
ಮೈಸೂರು,ಮಾ10,Tv10 ಕನ್ನಡ
ಪಾರ್ಶ್ವವಾಯು ಪೀಡಿತ ವ್ಯಕ್ತಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.ನನ್ನ ಸಾವಿಗೆ ಕೆಳಗಡೆ ಮನೆಯವರಾದ ಶ್ರೀನಿವಾಸ್ ಹಾಗೂ ಮಂಜುಳ ಕಾರಣ ಎಂದು ಸೆಲ್ಫೀ ವಿಡಿಯೋ ಮಾಡಿರುವ ಹಿನ್ನಲೆ ಮೃತರ ಪತ್ನಿ ತೆನಿಖೆ ನಡೆಸುವಂತೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ರಾಜು ಅನುಮಾನಾಸ್ಪದವಾಗಿ ಮೃತಪಟ್ಟವರು.ಕೆಲವು ವರ್ಷಗಳ ಹಿಂದೆ ಪೆರಾಲಿಸಿಸ್ ಆದ ಕಾರಣ ರಾಜು ಮನೆಯಲ್ಲೇ ಉಳಿದುಕೊಂಡಿದ್ದಾರೆ.ಪತ್ನಿ ಜಯಪ್ರದ ಇನ್ಫೋಸಿಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಜು ಸೆಲ್ಫೀ ವಿಡಿಯೋ ಮಾಡಿದ್ದಾರೆ.ಪತ್ನಿ ಹಾಗೂ ಮಕ್ಕಳಿಗೆ ತಿಳಿದು ಧೈರ್ಯ ತುಂಬಿ ಪ್ರಯತ್ನವನ್ನ ತಡೆಹಿಡಿದಿದ್ದಾರೆ.ಮರುದಿನವೇ ತಾನು ವಿಷ ಕುಡಿದಿರುವುದಾಗಿ ಪರಿಚಯಸ್ತರ ಬಳಿ ಹೇಳಿದ್ದಾರೆ.ಈ ಮಾಹಿತಿ ಜಯಪ್ರದಾ ರವರಿಗೆ ಗೊತ್ತಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾರೆ.ಸೆಲ್ಪೀ ವಿಡಿಯೋ ಪ್ರಕಾರ ಕೆಳಗಡೆ ಮನೆಯವರು ಆಗಾಗ ಜಗಳ ಮಾಡುತ್ತಿದ್ದರು.ನನ್ನ ಸಾವಿಗೆ ಶ್ರೀನಿವಾಸ್ ಹಾಗೂ ಮಂಜುಳಾ ಕಾರಣ ಎಂದು ವಿಡಿಯೋದಲ್ಲಿ ತಿಳಿಸಿರುವ ಹಿನ್ನಲೆ ಪತಿಯ ಸಾವಿನ ಬಗ್ಗೆ ಅನುಮಾನವಿದೆ ತೆನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಳಗಡೆ ಮನೆಯವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…