
ಎಣ್ಣೆ ಕೊಡಿಸಲು ಹಣ ಇಲ್ಲ ಎಂದ ವ್ಯಕ್ತಿ ಕಾಲಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಎಸ್ಕೇಪ್…ಅಪರಿಚಿತನ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 11, 2025
- No Comment
- 24
ಮೈಸೂರು,ಮಾ11,Tv10 ಕನ್ನಡ
ಎಣ್ಣೆ ಕೊಡಿಸಲು ಹಣ ಇಲ್ಲವೆಂದ ವ್ಯಕ್ತಿ ಮೇಲೆ ಅಪರಿಚಿತನೋರ್ವ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಧು ಎಂಬಾತ ಗಾಯಗೊಂಡಿದ್ದಾನೆ.ಹಲ್ಲೆ ನಡೆಸಿದ ಅಪರಿಚಿತ ಪರಾರಿಯಾಗಿದ್ದಾನೆ.ಗಾರೆ ಕೆಲಸ ಮಾಡುವ ಮಧು ನಾಲ್ಕು ದಿನಗಳ ಹಿಂದೆ ಬಿ.ಕೆ.ಸ್ಟ್ರೀಟ್ ನಲ್ಲಿರುವ ಬಾರ್ ಒಂದರಲ್ಲಿ ಎಣ್ಣೆ ಹೊಡೆದು ಫುಟ್ ಪಾತ್ ನಲ್ಲಿ ಕುಳಿತಿದ್ದಾಗ ಅಪರಿಚಿತನೋರ್ವ ಪರಿಚಯ ಮಾಡಿಕೊಂಡು ಎಣ್ಣೆ ಹೊಡೆಯುವಂತೆ ಪುಸಲಾಯಿಸಿದ್ದಾನೆ.ಅಪರಿಚಿತನ ಆಹ್ವಾನ ಸ್ವೀಕರಿಸಿ ಮಧು ಎಣ್ಣೆ ಹೊಡೆದಿದ್ದಾನೆ.ಬಾಟಲ್ ಖಾಲಿ ಆದ ನಂತರ ನನಗೂ ಎಣ್ಣೆ ಹೊಡೆಸು ಎಂದು ಅಪರಿಚಿತ ಕೇಳಿದ್ದಾನೆ.ನನ್ನ ಬಳಿ ಹಣ ಇಲ್ಲವೆಂದು ಮಧು ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಣ ಇಲ್ಲದಿದ್ದ ಮೇಲೆ ನನ್ನ ಎಣ್ಣೆ ಯಾಕೆ ಹೊಡೆದೆ ಎಂದು ಕಿರುಚಾಡುತ್ತಾ ಕಾಲಿನ ಮೇಲೆ ಕಲ್ಲನ್ನ ಎತ್ತಿಹಾಕಿ ಪರಾರಿಯಾಗಿದ್ದಾನೆ.ಗಾಯಗೊಂಡು ನರಳುತ್ತಿದ್ದ ಮಧು ನ ಸ್ಥಳೀಯರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪರಿಚಿತನ ಆಹ್ವಾನಕ್ಕೆ ಮಣಿದು ಎಣ್ಣೆ ಹೊಡೆದ ಮಧು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ…