
ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 11, 2025
- No Comment
- 393
ಮೈಸೂರು,ಮಾ11,Tv10 ಕನ್ನಡ
ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರಿನ ರಾಜಿಯಾ ಖಾನಂ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ಫಾರ್ಚುನರ್ ಕಾರನ್ನ ವೈಯುಕ್ತಿಕ ಕಾರಣಕ್ಕೆ ಪಡೆದಿದ್ದ ಪ್ರದೀಪ್ ಸಿಂಗ್ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲವೆಂದು ಎಫ್.ಐ.ಆರ್.ನಲ್ಲಿ ದಾಖಲಿಸಿದ್ದಾರೆ.
ರಾಜಿಯಾ ಖಾನಂ ರವರು ಖಾಸಗಿ ಫೈನಾನ್ಸ್ ನಲ್ಲಿ 21 ಲಕ್ಷ ಸಾಲ ಪಡೆದು ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಖರೀದಿಸಿದ್ದರು.ರಾಜಿಯಾ ಖಾನಂ ರವರ ಮೈದುನ ಕಾರನ್ನ ಬಳಸುತ್ತಿದ್ದರು.2024 ನವೆಂಬರ್ ನಲ್ಲಿ ಪ್ರದೀಪ್ ಸಿಂಗ್ ತಮ್ಮ ವೈಯುಕ್ತಿಕ ಬಳಕೆಗೆ ಪಡೆದಿದ್ದರು.ನಂತರ ಕಾರನ್ನ ಹಿಂದಿರುಗಿಸದೆ ಸಂಪರ್ಕಕ್ಕೆ ಸಿಕ್ಕಿಲ್ಲ.ಕಾರಿನಲ್ಲೇ ಒರಿಜಿನಲ್ ಡಾಕ್ಯುಮೆಂಟ್ಸ್ ಇಟ್ಟಿದ್ದರೆಂದು ಹೇಳಿಕೆ ನೀಡಿರುವ ರಾಜಿಯಾ ಖಾನಂ ರವರು ಪ್ರದೀಪ್ ಸಿಂಗ್ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ…