
ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ ಡಚ್ಚು…
- TV10 Kannada Exclusive
- March 12, 2025
- No Comment
- 70
ಮೈಸೂರು,ಮಾ12,Tv10 ಕನ್ನಡ
ಇಂದಿನಿಂದ ಮೈಸೂರಿನಲ್ಲಿ ಮತ್ತೆ ದರ್ಶನ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.
ಮೈಸೂರಿನ ನಜರಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ಆರಂಭವಾಗಿದೆ.ಡೆವಿಲ್ ಚಿತ್ರದ ಶೂಟಿಂಗ್ ಗಾಗಿ ಡಿ ಬಾಸ್ ಸರ್ಕಾರಿ ಅತಿಥಿ ಗೃಹಕ್ಕೆ ಬಂದಿದ್ದಾರೆ.ಅತಿಥಿ ಗೃಹದ ಬಳಿ ಬೌನ್ಸರ್‌ಗಳನ್ನ ನಿಯೋಜಿಸಲಾಗಿದೆ.
ಸಾರ್ವಜನಿಕರು ಸೇರಿದಂತೆ ಯಾರು ಒಳ ಹೋಗದಂತೆ ಭದ್ರತೆ ಒದಗಿಸಲಾಗಿದೆ.
ಸಿನಿಮಾ ಶೂಟಿಂಗ್‌ನವರಿಗೆ ಮಾತ್ರ ಸರ್ಕಾರಿ ಅತಿಥಿ ಗೃಹಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಅತಿಥಿ ಗೃಹದ ಮೂರು ದ್ವಾರದಲ್ಲೂ ಬೌನ್ಸರ್‌ಗಳನ್ನ ನಿಯೋಜಿಸಲಾಗಿದೆ.
ಬಿಗಿ ಭದ್ರತೆಯಲ್ಲಿ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಶೂಟಿಂಗ್ ನಡೆಯಲಿದೆ.
ಶೂಟಿಂಗ್ ಮುನ್ನ ದರ್ಶನ್ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ಡೆವಿಲ್ ಶೂಟಿಂಗ್ ಗೂ ಮುನ್ನ
ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದಿದ್ದಾರೆ.
ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ.
10 ತಿಂಗಳ ಬಳಿಕ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ…