ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ

ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲ
ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ ಜೋಡಿಸಿದ್ದಾರೆ.ಮೈಸೂರಿನಲ್ಲಿ
2 ತಿಂಗಳ ನಿರಂತರವಾಗಿ ಮೈಸೂರಿನ ವಿವಿಧ ಪ್ರದೇಶಗಳಲ್ಲಿ ನಡೆಯುವ ಮೂಕ ಸ್ಪಂದನ ಅಭಿಯಾನಕ್ಕೆ ಇಂದು
ಚಾಮರಾಜ ಕ್ಷೇತ್ರದ ವಾರ್ಡ್ ನಂಬರ್ 23ರ ಡಿವಾನ್ಸ್ ರಸ್ತೆಯ
ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ರವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿ ಭೂಮಿಯ ಮೇಲೆ ಕಾಲಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು‌‌ ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ. ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು. ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ. ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ.ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ.
ಹಿಂದಿನ ವರ್ಷಗಳಲ್ಲಿ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು ಪಕ್ಷಿಗಳು ನೀರು ಕುಡಿಯಲು ಹಿಂದೆ ಕಲ್ಲಿನ ನೀರಿನ ತೊಟ್ಟಿ ಯನ್ನು ಮನೆ ಮುಂದೆ ಸ್ಥಾಪಿಸುತ್ತಿದ್ದರು ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ತಾಣಿಸಿಕೊಳ್ಳುತ್ತಿದ್ದವು.ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿರುವುದು ವಿಷಾದನೀಯ.
ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕಡಿದು ಅಮಾಯಕ ಮೂಕ ಜೀವಿಗಳಿಗೆ ನೀರು ನೆರಳು ಇಲ್ಲದಂತೆ ಮಾಡಿರುವುದು ದುರಂತ. ಈ ನಿಟ್ಟಿನಲ್ಲಿ ಮಾನವೀಯತೆ ಹೊಂದಿರುವವರು ಬೇಸಿಗೆಯ ಧಗೆಯನ್ನು ನೀಗಿಸಲು ಪ್ರಾಣಿ ಪಕ್ಷಿಗಳಿಗೆ ನೀರು ಆಹಾರ ವನ್ನು ನೀಡಿ ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಾಜಿನಗರ ಪಾಲಿಕೆ ಸದಸ್ಯ ಸುಬ್ಬಯ್ಯ, ಆರ್ ಪರಮೇಶ್ ಗೌಡ, ಕಿರಣ್ ಗೌಡ,ಎಸ್ ಎನ್ ರಾಜೇಶ್, ಚೇತನ್, ನಂಜಪ್ಪ, ಬೈರತಿ ಲಿಂಗರಾಜು, ವಿನೋದ್ ಅರಸ್,ನಾಗೇಶ್ ಯಾದವ್, ಶ್ರೀನಿವಾಸ್, ಶ್ರವಣ್ ಮಾಲಿ, ಮಹಾನ್ ಶ್ರೇಯಸ್, ಅಮಿತ್, ನಾಣಿ ಗೌಡ, ಕೀರ್ತಿ, ಸುಚೇಂದ್ರ ಹಾಗೂ ಇನ್ನಿತರರು ಹಾಜರಿದ್ದರು..

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *