
ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ ವಂಚನೆ…ಇಬ್ಬರ ವಿರುದ್ದ FIR ದಾಖಲು…
- TV10 Kannada Exclusive
- March 12, 2025
- No Comment
- 236
ಮೈಸೂರು,ಮಾ12,Tv10 ಕನ್ನಡ
ಜಾಮೀನು ನೀಡುವ ಸಮಯದಲ್ಲಿ ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಸಲ್ಲಿಸಿ ನ್ಯಾಯಾಲಯವನ್ನೇ ಯಾಮಾರಿಸಿದ ಇಬ್ಬರ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಾಮರಾಜನಗರ ನಿವಾಸಿ ಮಾದೇಗೌಡ ಹಾಗೂ ಇಲವಾಲ ಹೋಬಳಿ ಜಟ್ಟಿಹುಂಡಿ ಗ್ರಾಮದ ಸಿದ್ದಪ್ಪಾಜಿ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ನ್ಯಾಯಾಧೀಶರ್ ಆದೇಶದಂತೆ ಸೆಶನ್ ನ್ಯಾಯಾಲಯದ ಆಡಳಿತಾಧಿಕಾರಿ ರಮೇಶ್.ಬಿ.ಕುಲಕರ್ಣಿ ರವರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಮೊಕದ್ದಮೆಗೆ ಸಂಭಂಧಿಸಿದಂತೆ ಆರೋಪಿ ಸಮೀವುಲ್ಲಾ ಎಂಬಾತನಿಗೆ ಮಾದೇಗೌಡ ರವರು ಹರದನಹಳ್ಳಿಯ ಸರ್ವೆ ನಂ.397/4 ರ ಸ್ವತ್ತಿನ ಪತ್ರವನ್ನ ಜಾಮೀನಿಗಾಗಿ ಸಲ್ಲಿಸಿದ್ದರು.ಸದರಿ ಪತ್ರವನ್ನ ಬೇರೆ ಬೇರೆ ನ್ಯಾಯಾಲಯದಲ್ಲಿ ಆಧಾರ್ ಕಾರ್ಡ್ ಗಳನ್ನ ದಾಖಲೆಯಾಗಿ ಬಳಕೆ ಮಾಡಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.ಮೇಲ್ನೋಟಕ್ಕೆ ಮಾದೇಗೌಡ ರವರು ನ್ಯಾಯಾಲಯವನ್ನ ವಂಚಿಸಿರುವುದು ಕಂಡು ಬಂದ ಹಿನ್ನಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರ ಆದೇಶದಂತೆ ಮಾದೇಗೌಡ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲೂ ಸಹ ಇದೇ ಮಾದೇಗೌಡ ಹಾಗೂ ಇಲವಾಲ ಹೋಬಳಿಯ ಸಿದ್ದಪ್ಪಾಜಿ ಇದೇ ರೀತಿಯಲ್ಲಿ ಆಧಾರ್ ಕಾರ್ಡ್ ಬಳಕೆ ಮಾಡಿ ವಂಚಿಸಿರುವುದು ಕಂಡು ಬಂದಿರುತ್ತದೆ.ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಭಂಧಿಸಿದಂತೆ 2 ನೇ ಆರೋಪಿಯಾದ ಯತೀಶ್ ಎಂಬಾತನಿಗೆ ಜಾಮೀನು ನೀಡಿದ್ದು ಸದರಿ ಆಧಾರ್ ಕಾರ್ಡ್ ಗಳು ಬೇರೆ ಬೇರೆ ನ್ಯಾಯಾಲಯದಲ್ಲಿ ಬಳಸಿ ನ್ಯಾಯಾಲಯವನ್ನೇ ವಂಚಿಸಿದ್ದಾರೆಂದು ಆರೋಪಿಸಲಾಗಿದೆ.ಎರಡನೇ ಪ್ರಕರಣದಲ್ಲಿ 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಪ್ರಕರಣ ದಾಖಲಿಸಲಾಗಿದೆ…