ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಹವಾ ಕ್ರಿಯೇಟ್ ಮಾಡಲು ಮಹಿಳೆ ಮೇಲೆ ಹಲ್ಲೆ…ಭಯದ ವಾತಾವರಣ ಮೂಡಿಸಿದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ12,Tv10 ಕನ್ನಡ

ನಮಗೆ ಇಲ್ಲಿ ಯಾರೂ ಗೌರವ ಕೊಡುತ್ತಿಲ್ಲ,ನಮ್ಮನ್ನ ಕಂಡರೆ ಏರಿಯಾದಲ್ಲಿ ಯಾರಿಗೂ ಭಯವಿಲ್ಲ,ಒಂದು ಹೆಣ ಉರುಳಿಸಿದ್ರೆ ನಾವು ಏನೆಂದು ಗೊತ್ತಾಗುತ್ತೆ ಎಂದು ಹೇಳಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡುವ ಉದ್ದೇಶದಿಂದ ಇಬ್ಬರು ಯುವಕರು ಮಹಿಳೆ ಹಾಗೂ ಓರ್ವ ವ್ಯಕ್ತಿ ಮೇಲೆ ಕಬ್ಬಿಣದ ರಾಡ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಏಕಲವ್ಯನಗರದಲ್ಲಿ ನಡೆದಿದೆ.ಯುವಕರಿಂದ ಹಲ್ಲೆಗೊಳಗಾದವರು ಪದ್ಮ ಹಾಗೂ ನಾಗೇಂದ್ರ.ಹವಾ ಕ್ರಿಯೇಟ್ ಮಾಡುವ ಭರದಲ್ಲಿ ಹಲ್ಲೆ ನಡೆಸಿದವರು ಓಂಕಾರ್ ಹಾಗೂ ಗೌರೀಶ್.

ಪದ್ಮ ರವರ ಅಳಿಯ ಶ್ರೀಧರ್ ರವರನ್ನ ನಡುರಸ್ತೆಯಲ್ಲಿ ನಿಲ್ಲಿಸಿಕೊಂಡ ಓಂಕಾರ್ ಹಾಗೂ ಗೌರೀಶ್ ನಾವು ಓಡಾಡುವಾಗ ಗೌರವ ಕೊಡುತ್ತಿಲ್ಲ.ನಮ್ಮ ಬಗ್ಗೆ ನಿಮಗೆ ಭಯವಿಲ್ಲ ಎಂದು ಹೇಳುತ್ತಾ ಹಲ್ಲೆಗೆ ಮುಂದಾಗಿದ್ದಾರೆ.ಈ ವೇಳೆ ಪದ್ಮ ಮಧ್ಯ ಪ್ರವೇಶಿಸಿ ಅಳಿಯನನ್ನ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ.ಒಂದು ಹೆಣ ಉರುಳಿದ್ರೆ ನಾವು ಈ ಏರಿಯಾದಲ್ಲಿ ಏನೆಂದು ಗೊತ್ತಾಗುತ್ತೆ ಎಂದು ಪದ್ಮ ಮೇಲೆ ರಾಡ್ ನಿಂದ ಬೀಸಿದ್ದಾರೆ.ನಂತರ ಕಲ್ಲನ್ನ ತೆಗೆದು ಕಾಲಿನ ಮೇಲೆ ಎತ್ತಿ ಹಾಕಿದ್ದಾರೆ.ಈ ವೇಳೆ ಪದ್ಮ ರವರ ಕಡೆಯವರು ಬಂದು ಜಗಳ ಬಿಡಿಸಿದ್ದಾರೆ.ನಂತರ ಮುಂದೆ ಓಡಿದ ಓಂಕಾರ್ ಹಾಗೂ ಗೌರೀಶ್ ಟೀ ಅಂಗಡಿಯ ಬಳಿ ಕುಳಿತಿದ್ದ ನಾಗೇಂದ್ರ ಎಂಬುವರ ಮೇಲೂ ಅಟ್ಯಾಕ್ ಮಾಡಿ ಒಬ್ಬರನ್ನ ಸಾಯಿಸಿ ಹೆಸರು ಮಾಡೋಣ ಎಂದು ಕಿರುಚಾಡಿ ಓಡಿದ್ದಾರೆ.ಏರಿಯಾದಲ್ಲಿ ಹೆಸರು ಮಾಡಬೇಕೆಂಬ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಸಿ ಪದ್ಮ ರವರು ಓಂಕಾರ್ ಹಾಗೂ ಗೌರೀಶ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *