
ನ್ಯಾಯಾಲಯದ ಆವರಣದಲ್ಲಿ ಕೊಲೆ ಬೆದರಿಕೆ ಆರೋಪ…ದಂಪತಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 12, 2025
- No Comment
- 23
ಮೈಸೂರು,ಮಾ12,Tv10 ಕನ್ನಡ
ಹಣಕಾಸಿನ ವಿಚಾರದಲ್ಲಿ ಮೈಸೂರು ನ್ಯಾಯಾಲಯ ಆವರಣದಲ್ಲಿ ವ್ಯಕ್ತಿಯೋರ್ವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ನ್ಯಾಯಾಲಯದ ಆದೇಶದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.ಬೆಂಗಳೂರು ಮೂಲದ ಸತೀಶ್, ಸಂಜಯ್ ಹಾಗೂ ಅನಿತಾ ಸಂಜಯ್ ವಿರುದ್ದ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆ.ಜಿ.ಕೊಪ್ಪಲಿನ ನಿವಾಸಿ ದಿನೇಶ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
2018 ರಲ್ಲಿ ದಿನೇಶ್ ಎಕ್ಸಲೆಂಟ್ ಸೋಲಾರ್ಸ್ ಎಂಬ ಕಂಪನಿ ಪ್ರಾರಂಭಿಸಿದ್ದರು.ಪರಿಚಯಸ್ತರ ಮೂಲಕ ದಿನೇಶ್ ರವರಿಗೆ ಸಂಜಯ್ ಹಾಗೂ ಅನಿತಾ ಸಂಜಯ್ ಪರಿಚಯವಾಗಿದ್ದಾರೆ.ಸೋಲಾರ್ ಪವರ್ ಪ್ರಾಜೆಕ್ಟ್ ಆರಂಭಿಸಲು ದಿನೇಶ್ ಗೆ ಸಲಹೆ ನೀಡಿದ್ದಾರೆ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಕೊಡಿಸುವ ಭರವಸೆ ಕೊಟ್ಟಿದ್ದಾರೆ.ಬಂಡವಾಳ ಹಾಕುವವರಿಗೆ ಪ್ರಾಜೆಕ್ಟ್ ಹಸ್ತಾಂತರವಾಗುತ್ತದೆ ಹಾಗೂ ಲಾಭಾಂಶ ಸಿಗುತ್ತದೆ ಎಂದು ತಿಳಿಸಿ ಹಲವು ದಾಖಲೆಗಳನ್ನ ತೋರಿಸಿದ್ದಾರೆ.ದಂಪತಿ ಮಾತನ್ನ ನಂಬಿದ ದಿನೇಶ್ ಕೆಲವರಿಂದ ಹಣ ಹೂಡಿಕೆ ಮಾಡಿಸಿದ್ದಾರೆ.ಸತೀಶ್ ರವರು ಎಮ್.ಓ.ಯು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ದಂಪತಿ ವ್ಯವಹರಿಸಿದ್ದಾರೆ.ನಂತರ ದಿನೇಶ್ ರವರಿಗೆ ಗೊತ್ತಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಾಖಲೆಗಳು ನಕಲಿ ಎಂದು.ಈ ನಡುವೆ ಬಲವಂತವಾಗಿ ಎಮ್.ಓ.ಯು.ಮಾಡಿಸಿಕೊಂಡು ಸಹಿ ಹಾಕಿಸಿಕೊಂಡಿರುವುದಾಗಿ ಆರೋಪ ಬಂದಿದೆ.ಈ ಕುರಿತಂತೆ ಸತೀಶ್ ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ದಿನೇಶ್ ರವರು ಮೈಸೂರಿನ ನ್ಯಾಯಾಲಯಕ್ಕೆ ಬಂದಾಗ ಹಣ ಹಿಂದಿರುಗಿಸುವಂತೆ ಸತೀಶ್ ಧಂಕಿ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಎಪ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದ್ದು ಸತೀಶ್, ಸಂಜಯ್ ಹಾಗೂ ಅನಿತಾ ಸಂಜಯ್ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ…