
ನಂಜನಗೂಡಿನಲ್ಲಿ ಎಚ್ಚೆತ್ತ ಅಬಕಾರಿ ಅಧಿಕಾರಿಗಳು…ಮಧ್ಯ ರಾತ್ರಿ ವೇಳೆ ಗಸ್ತು…ಅಕ್ರಮ ಮಧ್ಯ ಮಾರಾಟ ಹಾವಳಿಗೆ ಹಾಕಲಿದ್ದಾರೆ ಬ್ರೇಕ್…ಎಚ್ಚೆತ್ತುಕೊಳ್ಳದಿದ್ರೆ ಗಡೀಪಾರ್…
- TV10 Kannada Exclusive
- March 13, 2025
- No Comment
- 14

ನಂಜನಗೂಡು,ಮಾ12,Tv10 ಕನ್ನಡ
ಕೊನೆಗೂ ನಂಜನಗೂಡು ತಾಲೂಕಿನ ಅಬಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ಅಕ್ರಮ ಮಧ್ಯೆ ಮಾರಾಟ ಜಾಲಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.ಅನುಮಾನಾಸ್ಪದ ಸ್ಥಳಗಳಿಗೆ ಮಧ್ಯರಾತ್ರಿ ವೇಳೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.ಅಕ್ರಮ ಮಧ್ಯ ಮಾರಾಟ ಮಾಡಿ ಸಿಕ್ಕಿಬಿದ್ರೆ ಗಡೀಪಾರ್ ಮಾಡುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.ಹುಲ್ಲಹಳ್ಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿರುವ ಬಗ್ಗೆ ನಿನ್ನೆಯಷ್ಟೇ ವರದಿಯಾಗಿತ್ತು.ಪೆಟ್ಟಿ ಅಂಗಡಿಗಳ ಸಮೀಪವೇ ಮಧ್ಯದ ಪ್ಯಾಕೆಟ್ ಗಳ ರಾಶಿ ರಾಶಿ ಕಂಡು ಬಂದಿತ್ತು.ಈ ಸಂಭಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ದೂರು ನೀಡಿದ್ರು.ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಯೊಬ್ಬರು ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗುವ ಮೂಲಕ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ರು.ಈ ಸಂಭಂಧ Tv10 ಕನ್ನಡ ದಲ್ಲೂ ವರದಿ ಮಾಡಲಾಗಿತ್ತು. ಬಳ್ಳೂರು ಹುಂಡಿ ,ಈರೇಗೌಡನ ಹುಂಡಿ ಅಂಜನಪುರ ಗ್ರಾಮಗಳ ಕೆಲ ಪೆಟ್ಟಿ ಅಂಗಡಿಗಳ ಮುಂಭಾಗದಲ್ಲಿ ಪ್ಯಾಕೆಟ್ಗಳ ದೃಶ್ಯಾವಳಿಗಳ ಮೂಲಕ ಅಬಕಾರಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.ಈ ಹಿನ್ನಲೆ ಶಾಸಕ ದರ್ಶನ್ ಧೃವನಾರಾಯಣ್ ಸಹ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.ಇದೀಗ ಎಚ್ಚೆತ್ತ ಅಬಕಾರಿ ಇಲಾಖೆಯ ಡಿವೈಎಸ್ಪಿ ನಟರಾಜು ರವರ ನೇತೃತ್ವದಲ್ಲಿ ನಂಜನಗೂಡಿನ ಅಬಕಾರಿ ನಿರೀಕ್ಷಕರಾದ ನಾಗೇಂದ್ರ ಮತ್ತು ತಂಡದವರು ಬಳ್ಳೂರು ಹುಂಡಿ ಈರೇಗೌಡನ ಹುಂಡಿ ನಾಗಣಪುರ ಕಾಲೋನಿ ಮತ್ತು ಅಂಜನಾಪುರ ಗ್ರಾಮಗಳಿಗೆ ಮಧ್ಯರಾತ್ರಿ ಭೇಟಿ ನೀಡಿ ಅಕ್ರಮ ಮಧ್ಯ ಮಾರಾಟದ ಸ್ಥಳಗಳಿಗೆ ದಿಡೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗಡಿಪಾರಿನ ಎಚ್ಚರಿಕೆಯನ್ನು ನೀಡಿದ್ದಾರೆ…