
ಗಂಡ ಮಾಡಿದ ಸಾಲಕ್ಕೆ ಪತ್ನಿಗೆ ಟಾರ್ಚರ್…ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪ…ನಾಲ್ವರ ವಿರುದ್ದ FIR ದಾಖಲು…
- TV10 Kannada Exclusive
- March 13, 2025
- No Comment
- 70
ಮೈಸೂರು,ಮಾ13,Tv10 ಕನ್ನಡ
ಗಂಡ ಮಾಡಿದ ಸಾಲಕ್ಕೆ ಪತ್ನಿಗೆ ಟಾರ್ಚರ್ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಮೈಸೂರಿನಿಂದ ಬಲವಂತವಾಗಿ ಬಾಗಲಕೋಟೆಗೆ ಕರೆದೊಯ್ದು ಎರಡು ತಿಂಗಳ ಕಾಲ ಅಕ್ರಮವಾಗಿ ಕೂಡಿಹಾಕಿ ಮೊಬೈಲ್ ಕಸಿದು ಕೆಲಸ ಮಾಡಿಸಿಕೊಂಡು ವಾಪಸ್ ಕಳಿಸಿದ್ದಾರೆ.ಬಂಧನದಿಂದ ಹೊರಬಂದ ಮಹಿಳೆ ನಾಲ್ವರ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಹದೇಶ್ವರ ಬಡಾವಣೆ ನಿವಾಸಿ ಮಹದೇವಿ ಟಾರ್ಚರ್ ಅನುಭವಿಸಿದವರು.ಬಾಗಲಕೋಟೆ ನಿವಾಸಿ ಆಶಾ,ನಿರ್ಮಲಾ,ಆಶಾ ರವರ ಚಿಕ್ಕಮ್ಮ ಹಾಗೂ ಆಶಾ ರವರ ತಾಯಿ ವಿರುದ್ದ ಪ್ರಕರಣ ದಾಖಲಾಗಿದೆ.
ಮಹದೇವಿ ಪತಿ ಹನುಮಂತ ಮನೆ ಮನೆಗಳಿಗೆ ತೆರಳಿ ಪಾಠ ಹೇಳಿಕೊಡುತ್ತಾನೆ.ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದಿದ್ದಾನೆ.ಅದೇ ರೀತಿ ಆಶಾ ರವರಿಂದಲೂ ಹಣ ಪಡೆದಿದ್ದಾನೆ.ಕೆಲಸ ಕೊಡಿಸದ ಹಿನ್ನಲೆ ಹಣಕ್ಕಾಗಿ ಒತ್ತಡ ಹೆಚ್ಚಾದ ಕಾರಣ ಹನುಮಂತ ತಲೆಮರೆಸಿಕೊಂಡಿದ್ದಾನೆ.ಹಣ ಕೊಟ್ಟ ಆಶಾ ರವರು ಜನವರಿ ತಿಂಗಳಿನಲ್ಲಿ ಮೈಸೂರಿಗೆ ಬಂದು ಹನುಮಂತನ ಪತ್ನಿ ಮಹದೇವಿ ಮೇಲೆ ಹಣಕ್ಕಾಗಿ ಒತ್ತಡ ಹೇರಿದ್ದಾರೆ.ಈ ವೇಳೆ ಮಹದೇವಿ ಮೊಬೈಲ್ ಕಸಿದ ಆಶಾ ಮನೆಯವರು ಮಹಾದೇವಿ,ಈಕೆ ತಂಗಿ ಲಲಿತ,ಮಗ ವೇದಾಂತ್ ಮೂವರನ್ನ ಬಲವಂತವಾಗಿ ಬಾಗಲಕೋಟೆಗೆ ಕರೆದೊಯ್ದು 2 ತಿಂಗಳ ಕಾಲ ಬಂಧನದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಿಕೊಂಡು ನಂತರ ಬಿಡುಗಡೆ ಮಾಡಿ ಕಳಿಸಿದ್ದಾರೆ.ಗಂಡನ ಸಾಲಕ್ಕಾಗಿ ತನಗೆ ಕಿರುಕುಳ ನೀಡಿದ ಆಶಾ ಹಾಗೂ ಇತರರ ಮೇಲೆ ಮಹದೇವಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…