
ಸರಗಳ್ಳನ ಕೈ ಚಳಕ…ಮಹಿಳೆಯ ಮಾಂಗಲ್ಯ ಸರ ಮಾಯ…ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಘಟನೆ…
- TV10 Kannada Exclusive
- March 15, 2025
- No Comment
- 124
ಮೈಸೂರು,ಮಾ15,Tv10 ಕನ್ನಡ
ಬಸ್ ಹತ್ತುತ್ತಿದ್ದ ಮಹಿಳೆಯ ಚಿನ್ನದ ಸರ ಕಳ್ಳನ ಪಾಲಾದ ಘಟನೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಡೆದಿದೆ.ಶ್ರೀರಂಗಪಟ್ಟಣ ದಗಿರಿಕೊಪ್ಪಲಿನ ನಿವಾಸಿ ದೇವಮ್ಮ ಎಂಬುವರು ಚಿನ್ನದ ಸರ ಕಳೆದುಕೊಂಡವರು.ನಂಜನಗೂಡಿಗೆ ತೆರಳುವ ವೇಳೆ ರಶ್ ಇದ್ದ ಬಸ್ ಏರುವ ವೇಳೆ ಕಳ್ಳ ಕೈಚಳಕ ತೋರಿಸಿದ್ದಾನೆ.1.10 ಲಕ್ಷ ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ.ಈ ಸಂಭಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…