
ನೀರಿನಲ್ಲಿ ಮುಳುಗಿ ತಾತ ಮೊಮ್ಮೊಕ್ಕಳು ಸಾವು…
- TV10 Kannada Exclusive
- March 15, 2025
- No Comment
- 31

ಟಿ.ನರಸೀಪುರ,ಮಾ15,Tv10 ಕನ್ನಡ
ನೀರಿನಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿಯಾದ ದುರ್ಘಟನೆ
ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ತಿ. ನರಸೀಪುರ ಪಟ್ಟಣದ ನಿವಾಸಿಗಳಾ ಚೌಡಯ್ಯ (70), ಭರತ್ (13) ಧನುಷ್ (10) ಮೃತ ದುರ್ದೈವಿಗಳು.
ಪಟ್ಟಣದ ಕಾವೇರಿ ನದಿ ಬಳಿಗೆ ತೆರಳಿದ್ದ ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.
ನೀರಿನಲ್ಲಿ ಮುಳುಗಿದ ಮೊಮ್ಮಕ್ಕಳನ್ನು ರಕ್ಷಣೆಗೆ ಮುಂದಾದ ತಾತ ಚೌಡಯ್ಯ ರಕ್ಷಿಸಲಾಗದೆ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.