ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ಉಂಡೆನಾಮ…ಮಾಜಿ ಸಿಇಓ ನಾರಾಯಣ ನಾಯ್ಕ ವಿರುದ್ದ FIR…

ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ಉಂಡೆನಾಮ…ಮಾಜಿ ಸಿಇಓ ನಾರಾಯಣ ನಾಯ್ಕ ವಿರುದ್ದ FIR…

ಹುಣಸೂರು,ಮಾ16,Tv10 ಕನ್ನಡ

ಹುಣಸೂರು ತಸಲೂಕು ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75.44 ಲಕ್ಷ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.ಮಾಜಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ ನಾಯ್ಕ ವಿರುದ್ದ ಹಾಲಿ ಸಿಇಓ ಬೀರಪ್ಪ ರವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

2022-23 ರ ಅವಧಿಯಲ್ಲಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವೇಳೆ ತಿಳಿದುಬಂದಿದೆ.30-06-2023 ರಂದು ನಾರಾಯಣ ನಾಯ್ಕ ರವರು ನಿವೃತ್ತಿ ಹೊಂದಿದ್ದಾರೆ.ಸೂಕ್ತ ಲೆಕ್ಕಗಳನ್ನ ಪಾಲಿಸದೆ ಸಂಘಕ್ಕೆ 75,44,833/- ರೂಗಳನ್ನ ದುರುಪಯೋಗ ಮಾಡಿಕೊಂಡು ಸಂಘಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಲಾಗಿದೆ.

ಸಾಲಗಾರರ ಲೆಡ್ಜರ್ ನಲ್ಲಿ ಹಣ ಪಾವತಿ ಆದಂತೆ ಹಾಗೂ ಮರುಪಾವತಿ ಆದಂತೆ ನಮೂದಿಸಿ ನಗದು ಪುಸ್ತಕದಲ್ಲಿ ಜಮಾ ಮಾಡದೆ ಇರುವುದು 67,95,266/- ರೂ ಇದೆ.

ಸದಸ್ಯರಿಗೆ ದಾಖಲಾತಿ ಇಲ್ಲದೆ ಸಾಲ ಮುಂಗಡ ಮಾಡಿರುವುದು 4,58,000/- ರೂ ಇದೆ

ಜಿಲ್ಲಾ ಬ್ಯಾಂಕ್ ಷೇರು ವೆತ್ಯಾಸ. 63,850/- ರೂ ಇದೆ

ಕೆಸಿಸಿ ಅಮಾನತ್ತು ಬಾಬ್ತಿಗೆ ಹೆಚ್ಚಿನ ಖರ್ಚು ತೋರಿಸಿರುವುದು 2,03,477/- ಇದೆ

ಶಿಲ್ಕು ವೆತ್ಯಾಸ 24,240/- ರೂಗಳಿವೆ

ಒಟ್ಟು ನಾರಾಯಣ ನಾಯ್ಕ ಅವಧಿಯಲ್ಲಿ 75,44,833/- ರೂಗಳ ಹಣ ದುರುಪಯೋಗವಾಗಿದೆ.ಈ ಸಂಭಂಧ ನಾರಾಯಣ ನಾಯ್ಕ ರವರನ್ನ ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿರುವುದಿಲ್ಲ.ಹೀಗಾಗಿ ಕೃಷಿಪತ್ತಿನ ಸಹಕಾರ ಸಂಘಗಳ ನಿಯಮಾನುಸಾರ ನಾರಾಯಣ ನಾಯ್ಕ ವಿರುದ್ದ FIR ದಾಖಲಿಸಲಾಗಿದೆ…

Spread the love

Related post

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…

Leave a Reply

Your email address will not be published. Required fields are marked *