
ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…
- TV10 Kannada Exclusive
- March 17, 2025
- No Comment
- 86

ಮೈಸೂರು,ಮಾ17,Tv10 ಕನ್ನಡ
ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ ಜಯಕೀರ್ತಿ,ಪ್ರಭು, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ್, ಸುನೀಲ್, ಮಧುಕೇಶ್ ಮಹೇಶ್, ಶಶಿಕಿರಣ್ ರವರಿ CEIR Portal ಮೂಲಕ ಮೊಬೈಲ್ ಪೋನ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ತಲುಪಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು…