
ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…
- TV10 Kannada Exclusive
- March 17, 2025
- No Comment
- 76
ಮೈಸೂರು,ಮಾ17,Tv10 ಕನ್ನಡ
ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿ ಕೊಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುನೀತ್ ರಾಜಕುಮಾರ್ ರವರು ಮಾಡಿರುವ ಸೇವಾ ಕಾರ್ಯವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿರಲಿ ಎಂದು ಸ್ಮರಿಸಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಾಮ ಗೆಳಯರ ಬಳಗದ ಅಧ್ಯಕ್ಷರಾದ ಸಿ ಸಂದೀಪ್, ಅಂಬಳೆ ಶಿವಣ್ಣ, ಉಮಾಶಂಕರ್, ಧರ್ಮೇಂದ್ರ, ಬಸವರಾಜು, ಮಹೇಶ್ ಅರಸ್, ಯೋಗೀಶ್, ರಾಕೇಶ್, ಧನುಷ್, ಕಿರಣ್, ರಾಮು, ಸಿದ್ದಣ್ಣ, ವೆಂಕಟೇಶ್, ರಾಜೇಂದ್ರ, ಪುರುಷೋತ್ತಮ್, ಮಧುಸೂಧನ್, ದೀಪಕ್, ಭಾನುಪ್ರಕಾಶ್, ವಿನಯ್ ಮುಂತಾದವರು ಹಾಜರಿದ್ದರು…