
ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…
- TV10 Kannada Exclusive
- March 18, 2025
- No Comment
- 45
ಪಿರಿಯಾಪಟ್ಟಣ,ಮಾ18,Tv10 ಕನ್ನಡ
ಯುವಕನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಜ್ವಲ್ (21) ಹಲ್ಲೆಗೊಳಗಾದ ಯುವಕ.
ಪಿರಿಯಾಪಟ್ಟಣ ತಾಲ್ಲೂಕು ಆಯಿತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಹಳೆ ದ್ವೇಷದ ಹಿನ್ನೆಲೆ ನಾಲ್ವರಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ನಾಗೇಶ್,ಪಾಲಾಕ್ಷ, ಮಹೇಶ,ಅಕ್ಷಯ್ ಕುಮಾರ್
ದೊಣ್ಣೆಯಿಂದ ಮನಸೋ ಇಚ್ಛೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಪ್ರಜ್ವಲ್ ಬೆನ್ನಿಗೆ ಗಂಭೀರ ಗಾಯವಾಗಿದ್ದು
ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…