
ವಿಧಾನಸಭಾ ಚುನಾವಣೆ ಆಕಾಂಕ್ಷಿ ವಿರುದ್ದ ಅವಹೇಳನಾಕಾರಿ ಪೋಸ್ಟ್…ನಾಲ್ವರ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 26, 2025
- No Comment
- 61
ಮೈಸೂರು,ಮಾ26,Tv10 ಕನ್ನಡ
2023 ರಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಆಕಾಂಕ್ಷಿಯ ಗೌರವಕ್ಕೆ ಕುಂದು ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ನಾಲ್ವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಡ್ಯ ಜಿಲ್ಲೆ ಸಂತೇಬಾಚನಹಳ್ಳಿ ಗ್ರಾಮದ ರವಿ,ಚೇತನ್ ಕುಮಾರ್,ಶ್ರೀಕಾಂತ್ ಹಾಗೂ ಕುಮಾರ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ವಿಜಯನಗರ ನಿವಾಸಿ ಸುರೇಶ್ ಎಂಬುವರು ನ್ಯಾಯಾಲಯದಿಂದ ಆದೇಶ ಮಾಡಿಸಿ ನಾಲ್ವರ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದಾರೆ.2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸುರೇಶ್ ರವರು ಅಭ್ಯರ್ಥಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು.ಈ ವೇಳೆ ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರವಿ,ಚೇತನ್ ಕುಮಾರ್,ಶ್ರೀಕಾಂತ್,ಕುಮಾರ್ ರವರು ಸುರೇಶ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾರಿಕರ,ಅವಹೇಳನಾಕಾರಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ,TV ಚಾನೆಲ್ ಗಳಲ್ಲಿ,ವಾಟ್ಸಾಪ್ ಗಳಲ್ಲಿ ರಾಜಕೀಯ ಪ್ರತಿಷ್ಟೆ ಕುಗ್ಗಿಸಿ ಭವಿಷ್ಯದಲ್ಲಿ ಯಾವುದೇ ಗೌರವಾನ್ವಿತ ಸ್ಥಾನ ಪಡೆಯಬಾರದೆಂಬ ಉದ್ದೇಶದಿಂದ ವೈಯುಕ್ತಿಕ ಗೌರವಕ್ಕೆ ಹಾನಿ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ರು.ವಿರೋಧ ಪಕ್ಷದಿಂದ ಒಂದು ಕೋಟಿ ಪಢದು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ನಾಲ್ವರು ಏಪ್ರಿಲ್2023 ರಲ್ಲಿ ಅಪ್ ಲೋಡ್ ಮಾಡಿದ ಆರೋಪ ನಾಲ್ವರ ವಿರುದ್ದ ಮಾಡಲಾಗಿದೆ…