
ಹುಲಿ ಮೃತದೇಹ ಪತ್ತೆ…ಗಾಯವಾಗಿರುವ ಸ್ಥಿತಿಯಲ್ಲಿ ಶವ ಪತ್ತೆ…
- TV10 Kannada Exclusive
- May 25, 2025
- No Comment
- 5

ಹುಣಸೂರು,ಮೇ25,Tv10 ಕನ್ನಡ
ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗರಹೊಳೆ ಮುದ್ದನಹಳ್ಳಿ ಅರಣ್ಯಪ್ರದೇಶದ ನಾಲೆ ಬಳಿ ಹುಲಿ ಮೃತದೇಹ ಪತ್ತೆಯಾಗಿದೆ.ವಾರದ ಹಿಂದೆ ಈ ಭಾಗದ ಅರಣ್ಯದಲ್ಲಿ ವೆಂಕಟೇಶರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು.
ಹುಲಿ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.
ಹುಲಿ ಶವದ ಬಳಿ ರಕ್ತ ಮಿಶ್ರಿತ ಹುಲಿ ಮಲ ಪತ್ತೆಯಾಗಿದೆ.ಹಿಂಗಾಲಿಗೆ ಗಾಯವಾಗಿರುವ ಸ್ಥಿತಿಯಲ್ಲಿ ಹುಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ನಾಗರಹೊಳೆ ಹೊಳೆ ಉದ್ಯಾನದ ನಿರ್ದೆಶಕಿ ಪಿ.ಎ.ಸೀಮಾ. ಆರ್.ಎಫ್. ಒ. ಸುಬ್ರಮಣಿ,
ಪಶುವೈದ್ಯ ಡಾ.ರಮೇಶ್ ಹಾಗೂ ಹನಗೋಡು ಪಶು ಆಸ್ಪತ್ರೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…