
ಕೊಡೋತ್ಸವ ವೇಳೆ ಬೆಂಕಿಗೆ ಬಿದ್ದು ಗಾಯಗೊಂಡಿದ್ದ ಗುಡ್ಡಪ್ಪ ಸಾವು…
- TV10 Kannada Exclusive
- May 25, 2025
- No Comment
- 51
ಮಂಡ್ಯ,ಮೇ25,Tv10 ಕನ್ನಡ
ಕೊಂಡಕ್ಕೆ ಬಿದ್ದು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಗುಡ್ಡಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಾರಸವಾಡಿ ಗ್ರಾಮದ ಮಹದೇವು ಮೃತ ಗುಡ್ಡಪ್ಪ.ಏಪ್ರಿಲ್ 21ರಂದು ಗ್ರಾಮದಲ್ಲಿ ಬೋರೇದೇವರ ಕೊಂಡೋತ್ಸವ ನಡೆದಿತ್ತು.ಈ ವೇಳೆ ಗುಡ್ಡಪ್ಪ ನಿಯಂತ್ರಣ ತಪ್ಪಿ ಕೆಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳು ಗುಡ್ಡಪ್ಪಗೆ ಮೈಸೂರು, ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆ ಫಲಿಸದೆ ಗುಡ್ಡಪ್ಪ ಮಹದೇವು ಮೃತಪಟ್ಟಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು…