
MCP ಹಂಟರ್ಸ್ ಗೆ MPPL ಕಪ್…5 ನೇ ಆವೃತ್ತಿಗೆ ತೆರೆ…
- TV10 Kannada Exclusive
- June 5, 2025
- No Comment
- 176
ಮೈಸೂರು,ಜೂ5,Tv10 ಕನ್ನಡ
ಮೈಸೂರು ಸಿಟಿ ಪೊಲೀಸ್ ಪ್ರೀಮಿಯರ್ ಲೀಗ್ ನ 5 ನೇ ಆವೃತ್ತಿಯ ಕಪ್ ಮೈಸೂರು ಸಿಟಿ ಪೊಲೀಸ್ ಹಂಟರ್ಸ್ ತಂಡಕ್ಕೆ ಒಲಿದಿದೆ.ಚಾಮುಂಡಿಬೆಟ್ಟದ ತಪ್ಪಲಿನ ಫೈರಿಂಗ್ ರೇಂಜ್ ಮೈದಾನದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ಸಿಟಿ ಪೊಲೀಸ್ ಬುಲ್ಸ್ ತಂಡವನ್ನ ಮಣಿಸಿದ ಮೈಸೂರು ಸಿಟಿ ಪೊಲೀಸ್ ಹಂಟರ್ಸ್ ತಂಡ MPPL ಕಪ್ ತನ್ನ ಮಡಿಲಿಗೇರಿಸಿಕೊಂಡಿದೆ. ಮೈಸೂರು ನಗರ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿ ಪ್ರತಿ ವರ್ಷ MPPL (Myusuru City Police Premier League)ಎಂಬ ಕ್ರಿಕೆಟ್ ಪಂದ್ಯಾವಳಿ ಅನ್ನು ಅಯೋಜಿಸಲಾಗುತ್ತದೆ. ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳಿಂದ ಮಾತ್ರ ಸಾಧ್ಯ ಎಂದು ಮನಗಂಡಿರುವ ಇಲಾಖೆ ಪ್ರತಿವರ್ಷ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಿಕೊಂಡು ಬರುತ್ತಿದೆ. ಉಪಪೊಲೀಸ್ ಆಯುಕ್ತರುಗಳಾದ ಮುತ್ತುರಾಜು ಎಂ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಂದರ್ ರಾಜ್ ಕೆ.ಎಸ್. ಅಪರಾಧ ಮತ್ತು ಸಂಚಾರ ರವರ ಉಪಸ್ಥಿತಿಯಲ್ಲಿ MPPL-5 ಫೈನಲ್ ಪಂದ್ಯಾವಳಿ ಇಂದು ಬೆಳಿಗ್ಗೆ MCP HUNTERS VS MCP BULLS ನಡುವೆ ನಡೆಯಿತು. ಜಯದ ಮಾಲೆಯನ್ನು MCP HUNTERS ಅಲಂಕರಿಸಿದೆ. ರನ್ನರ್ ಅಪ್ ಆಗಿ MCP BULLS ಹೊರಹೊಮ್ಮಿದೆ.
ಪಂದ್ಯಾವಳಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು.ಒಟ್ಟು 62 ಪಂದ್ಯಗಳು ನಡೆಯಿತು. ಪ್ರತಿ ಪಂದ್ಯವು 8 ಒವರ್ ಗಳ ಪಂದ್ಯಗಳಾಗಿತ್ತು. ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.00 ಗಂಟೆಯವರೆಗೆ 1 ಪಂದ್ಯದಂತೆ ಬಂದೋಬಸ್ತ್ ಕರ್ತವ್ಯದ ದಿನಗಳನ್ನು ಹೊರತುಪಡಿಸಿ ಸತತ 4 ತಿಂಗಳು ಪಂದ್ಯಗಳು ನಡೆಯಿತು.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಂದ್ಯದ ಪುರೋಷೋತ್ತಮರಾಗಿ ಮಲ್ಲೇಶ್, ಸರಣಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ಗಣೇಶ್, ಸರಣಿಯ ಉತ್ತಮ ಬೌಲರ್ ಆಗಿ ಪರುಶುರಾಮ್ ಕಾಂಬ್ಲಿ, ಸರಣಿ ಶ್ರೇಷ್ಟರಾಗಿ ವಿಜಯ್ ಕುಮಾರ್ ರವರು ಪ್ರಶಸ್ತಿಗೆ ಭಾಜನರಾದರು…