
ಸಂಚಾರಿ ಪೊಲೀಸರಿಗೆ ಮೂಗುದಾರ…ತಪಾಸಣೆ ವೇಳೆ ಮುನ್ನೆಚ್ಚರಿಕೆ ವಹಿಸಿ…ಖಡಕ್ ವಾರ್ನಿಂಗ್…
- Uncategorized
- June 2, 2025
- No Comment
- 29



ಮೈಸೂರು,ಜೂ2,Tv10 ಕನ್ನಡ
ತಪಾಸಣೆ ವೇಳೆ ಮಗು ಸಾವನ್ನಪ್ಪಿದ ಘಟನೆ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.ಸಂಚಾರಿ ಪೊಲೀಸರಿಗೆ ತಪಾಸಣೆ ವೇಳೆ ನಿಯಮಗಳನ್ನ ಪಾಲಿಸುವಂತೆ ಖಡಕ್ ಆದೇಶ ಹೊರಡಿಸಿದೆ.ವಾಹನ ಸವಾರರಿಗೆ ಅಪಾಯ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.ವಾಹನ ತಪಾಸಣೆ ವೇಳೆ ಅನುಸರಿಸಬೇಕಾದ ಅಂಶಗಳ ಸುತ್ತೋಲೆಯನ್ನ ಹೊರಡಿಸಿದೆ.
ದಾಖಲೆ ಪರಿಶೀಲಿಸುವ ವೇಳೆ ವೇಳೆ ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆ ನಡೆಸಬಾರದು.ಸಂಚಾರಿ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡುಬಂದಾಗ ಮಾತ್ರ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನ ದಾಖಲಿಸಬೇಕು.ಪ್ರಕರಣಗಳನ್ನ ದಾಖಲಿಸುವ ಮುನ್ನ ಹೆದ್ದಾರಿಗಳಲ್ಲಿ zig zag ಮಾದರಿಯಲ್ಲಿ ಬ್ಯಾರಿಕೇಡ್ ಗಳನ್ನ ಅಳವಡಿಸಿ ವಾಹನಗಳನ್ನ ತಡೆಯಬಾರದು.ಧಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು,ಕೀಗಳನ್ನ ಕಿತ್ತುಕೊಳ್ಳುವುದು ಮಾಡಬಾರದು.ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನಗಳನ್ನ ಬೆನ್ನಟ್ಟದೇ ನಂಬರ್ ಗಳನ್ನ ಗುರುತಿಸಿ ಅವರ ಮಾಹಿತಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.ವಾಹನ ತಪಾಸಣೆ ವೇಳೆ ರಿಫ್ಲೆಕ್ಟಿವ್ ಜಾಕೆಟ್ ಗಳನ್ನ ಧರಿಸಬೇಕು.ಸಂಜೆ ವೇಳೆ ಕಡ್ಡಾಯವಾಗಿ ಎಲ್.ಇ.ಡಿ.ಬೇಟನ್ ಬಳಸಬೇಕು.ಹೆದ್ದಾರಿಗಳಲ್ಲಿ ವೇಗವಾಗಿ ಚಲಾಯಿಸುವ ವಾಹನಗಳನ್ನ ತಡೆಯುವ ಪ್ರಯತ್ನ ಮಾಡದೆ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.ಸಾಧ್ಯವಾದಷ್ಟು ಸಿಗ್ನಲ್ ದೀಪಗಳ ಬಳಿ ತಪಾಸಣೆ ನಡೆಸಬೇಕು ಎನ್ನುವುದು ಸೇರಿದಂತೆ ಹಲವು ನಿಯಮಗಳನ್ನ ಪಾಲಿಸುವಂತೆ ಸಂಚಾರಿ ಪೊಲೀಸರಿಗೆ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ…