
ಜೆಕೆ ಟೈರ್ಸ್ ಕಾರ್ಮಿಕನ ಕಾಲು ಬೆರಳು ಕಟ್…ಕೆಲಸದ ವೇಳೆ ಘಟನೆ…ಮೂವರ ವಿರುದ್ದ ಪ್ರಕರಣ ದಾಖಲು…
- Crime
- June 10, 2025
- No Comment
- 151
ಮೈಸೂರು,ಜೂ10,Tv10 ಕನ್ನಡ
ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನ ಕಾಲಿನ ಮೂರು ಬೆರಳು ಕಟ್ ಆದ ಘಟನೆ ಮೈಸೂರಿನ ಜೆಕೆ ಫ್ಯಾಕ್ಟರಿಯಲ್ಲಿ ನಡೆದಿದೆ.ಫ್ಯಾಕ್ಟರಿಯ ವಿಭಾಗದ ಮೂವರು ಮುಖ್ಯಸ್ಥರ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೂಕ್ತ ತರಬೇತಿ ನೀಡದೆ ಅನುಭವ ಇಲ್ಲದ ವಿಭಾಗದಲ್ಲಿ ಬಲವಂತವಾಗಿ ಕೆಲಸ ಮಾಡಿಸಿರುವುದಾಗಿ ಆರೋಪಿಸಿ ಗಾಯಗೊಂಡ ಕಾರ್ಮಿಕನ ಪತ್ನಿ ಮೂವರು ಮುಖ್ಯಸ್ಥರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಸೂಪರ್ ವೈಸರ್ ನಾಗರಾಜು,ಮ್ಯಾನೇಜರ್ ಆನಂದ್ ಹಾಗೂ ಪ್ರೊಡಕ್ಷನ್ ಇನ್ಚಾರ್ಜ್ ರಾಜೀವ್ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.25 ವರ್ಷಗಳಿಂದ ಕೆಲಸ ಮಾಡುತ್ತಿರುವ ಜಯೇಶ್ ಎಂಬುವರು ಗಾಯಗೊಂಡವರು.
ರಾತ್ರಿಪಾಳಿಯಲ್ಲಿ 10TK ದೋಷಪೂರಿತ ಮೆಷಿನ್ ನಲ್ಲಿ ಕೆಲಸ ಮಾಡುವಾಗಿ ಎಡಗಾಲಿನ ಮೂರು ಬೆರಳುಗಳು ಕಟ್ ಆಗಿದೆ.25 ವರ್ಷದಿಂದ ಕೆಲಸ ಮಾಡುತ್ತಿದ್ದ ಜಯೇಶ್ ರವರನ್ನ ಕಾರಣ ನೀಡದೆ ಕೆಲಸದಿಂದ ತೆಗೆದುಹಾಕಿದ್ದರು.ಈ ಬಗ್ಗೆ ಪ್ರಶ್ನಿಸಿ ಜಯೇಶ್ ಕಾರ್ಮಿಕ ನ್ಯಾಯಾಲಯ ಮೆಟ್ಟಲೇರಿದ್ದರು.ಜಯೇಶ್ ರವರನ್ನ ಪುನರ್ ನೇಮಕ ಮಾಡಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು.ನ್ಯಾಯಾಲಯದ ಆದೇಶದಂತೆ ನೇಮಕ ಮಾಡಿಕೊಂಡ ಫ್ಯಾಕ್ಟರಿ ಈ ಹಿಂದೆ ಕೆಲಸ ಮಾಡುತ್ತಿದ್ದ ವಿಭಾಗದಲ್ಲಿ ಅವಕಾಶ ನೀಡದೆ ಮತ್ತೊಂದು ವಿಭಾಗದಲ್ಲಿ ನೇಮಕ ಮಾಡಿತ್ತು.ಆ ವಿಭಾಗದಲ್ಲಿ ಕೆಲಸ ಮಾಡಲು ಸೂಕ್ತ ತರಬೇತಿ ನೀಡದೆ ಬಲವಂತವಾಗಿ ಕೆಲಸ ಮಾಡುವಂತೆ ಮೂವರು ಒತ್ತಾಯ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದರೆಂದು ಜಯೇಶ್ ರವರ ಪತ್ನಿ ಜ್ಯೋತಿ ಆರೋಪಿಸಿದ್ದಾರೆ…