
ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…
- TV10 Kannada Exclusive
- June 11, 2025
- No Comment
- 204

ಮೈಸೂರು,ಜೂ11,Tv10 ಕನ್ನಡ



ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ.2021 ರಲ್ಲೇ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಅನುಷ್ಠಾನಗೊಳಿಸಲು ಮೈಸೂರು ಅಭಿವೃದ್ದಿ ಪ್ರಾಧಿಕಾರ ಸನ್ನದ್ಧವಾಗುತ್ತಿದೆ.ಆಯುಕ್ತರಾದ ಕೆ.ಆರ್.ರಕ್ಷಿತ್ ರವರು ವಿಶೇಷ ಆಸಕ್ತಿ ವಹಿಸಿ ಸೌಲಭ್ಯಗಳನ್ನ ಕಲ್ಪಿಸಿದ್ದಾರೆ.ಇ ಆಫೀಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ಆರಂಭವಾಗಿದೆ.ಇ ಆಫೀಸ್ ನೂಡಲ್ ಅಧಿಕಾರಿ ಹಾಗೂ ವಲಯಾಧಿಕಾರಿ ಸಂಪತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ.ಎರಡು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ.ತರಬೇತಿಯಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಗುತ್ತಿದೆ.ಪಾರದರ್ಶಕ ಆಡಳಿತ ನಡೆಸಲು ಒತ್ತು ನೀಡಿರುವ ಆಯುಕ್ತ ಕೆ.ಆರ್.ರಕ್ಷಿತ್ ಸಹ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ…