ವರದಕ್ಷಿಣೆ ಕಿರುಕುಳ…ಪತ್ನಿ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…ಗಂಡನ ಮೇಲೆ ಗ್ರಾಮಸ್ಥರಿಂದಲೇ ಕೊಲೆ ಆರೋಪ…

ವರದಕ್ಷಿಣೆ ಕಿರುಕುಳ…ಪತ್ನಿ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…ಗಂಡನ ಮೇಲೆ ಗ್ರಾಮಸ್ಥರಿಂದಲೇ ಕೊಲೆ ಆರೋಪ…

  • Crime
  • June 10, 2025
  • No Comment
  • 106

ನಂಜನಗೂಡು,ಜೂ10,Tv10 ಕನ್ನಡ

ಮದುವೆ ಆಗಿ 22 ವರ್ಷವಾದರೂ ಗಂಡನಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ ಗೃಹಿಣಿ ಹಾಗೂ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಬ್ಬರ ಸಾವಿಗೆ ಪತಿ ಗಂಡನೇ ಹೊಣೆ ಎಂದು ಗ್ರಾಮಸ್ಥರು ಕೊಲೆ ಆರೋಪ ಹೊರೆಸಿದ್ದಾರೆ.ತಾಯಿ ಮಗಳ ಸಾವಿಗೆ ಕಾರಣ ಕೇಳಲು ಹೋದ ಗ್ರಾಮಸ್ಥರ ಜೊತೆ ಪೊಲೀಸರು ಸಂಯಮದಿಂದ ವರ್ತಿಸಿಲ್ಲವೆಂದು ಆರೋಪಿಸಿದ್ದಾರೆ.ಪತಿರಾಯನೇ ಪತ್ನಿ ಹಾಗೂ ಮಗಳನ್ನ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.

ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ತಾಯಿ ಮಹದೇವಮ್ಮ( 38) ಮಗಳು ಸುಪ್ರಿಯ(20) ಮೃತ ದುರ್ದೈವಿಗಳು.ಕೊಲೆ ಆರೋಪ ಹೊತ್ತ ಪತಿ ಜಯರಾಮು ನಾಪತ್ತೆಯಾಗಿದ್ದಾನೆ.22 ವರ್ಷಗಳ ಹಿಂದೆ ಮಹದೇವಮ್ಮಳನ್ನ ಮದುವೆ ಆಗಿದ್ದ ಜಯರಾಮ ದಂಪತಿಗೆ ಸುಪ್ರಿಯ ಎಂಬ ಮಗಳಿದ್ದಾಳೆ.ವರ್ಷಗಳು ಉರುಳಿದರೂ ಜಯರಾಮು ಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ.ಈ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ.ಇದರಿಂದ ಮಗಳು ಸುಪ್ರಿಯ ಸಹ ನೊಂದಿದ್ದಳು.ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಳೆಂದು ಹೇಳಲಾಗಿದೆ.ಪೊಲೀಸರಿಂದಾಗಲಿ ಅಥವಾ ಕುಟುಂಬಸ್ಥರಿಂದ ಮಹದೇವಮ್ಮ ಗೆ ನ್ಯಾಯ ದೊರೆತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗಂಡನ ವರದಕ್ಷಿಣೆ ದಾಹಕ್ಕೆ ಬೇಸತ್ತಿದ್ದ ಮಹದೇವಮ್ಮ ಹಾಗೂ ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು ಪೊಲೀಸರ ವರ್ತನೆಯನ್ನೂ ಸಹ ಖಂಡಿಸಿದ್ದಾರೆ…

Spread the love

Related post

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು… ಎಚ್.ಡಿ.ಕೋಟೆ,ಜೂ4,Tv10 ಕನ್ನಡ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಬೋವಿ ಎಂಬುದನ್ನು ಬೋಯಿ ಎಂದು ತಿದ್ದಿದ ಆರೋಪದ ಹಿನ್ನಲೆ ಶಾಲೆ ಮುಖ್ಯಶಿಕ್ಷಕ ಅಮಾನತುಪಡಿಸಲಾಗಿದೆ.ಹೆಚ್.ಡಿ.ಕೋಟೆ…
ಚಿಕ್ಕಾಟಿ ಗ್ರಾಮದಲ್ಲಿ ಮಹಿಳೆಯರಿಗೆ ಮುಟ್ಟು ವೃತು ಚಕ್ರ ಜಾಗೃತಿ

ಚಿಕ್ಕಾಟಿ ಗ್ರಾಮದಲ್ಲಿ ಮಹಿಳೆಯರಿಗೆ ಮುಟ್ಟು ವೃತು ಚಕ್ರ ಜಾಗೃತಿ

ಚಿಕ್ಕಾಟಿ ಗ್ರಾಮದಲ್ಲಿ ಮಹಿಳೆಯರಿಗೆ ಮುಟ್ಟು ವೃತು ಚಕ್ರ ಜಾಗೃತಿ ಚಾಮರಾಜನಗರ ಜಿಲ್ಲೆಯ ಚಿಕ್ಕಾಟಿ ಗ್ರಾಮದಲ್ಲಿ ಗ್ರಾಮ ಪಂಚಾಯತ್, ಸಂಜೀವಿನಿ ಇಲಾಖೆ ಹಾಗೂ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಹಿಳೆಯರ ಆರೋಗ್ಯ…
ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ… ಮೈಸೂರು,ಮೇ27,Tv10 ಕನ್ನಡ ವೃದ್ದೆ ಮನೆಯಲ್ಲಿ ನರ್ಸಿಂಗ್ ಸೇವೆಗೆ ಸೇರಿಕೊಂಡ ಐನಾತಿ…

Leave a Reply

Your email address will not be published. Required fields are marked *