
3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತು… ಅಪರಾಧಿಗೆ ಜೀವಾವಧಿ ಶಿಕ್ಷೆ…
- CrimeTV10 Kannada Exclusive
- July 12, 2025
- No Comment
- 74
ಮಂಡ್ಯ,ಜು12,Tv10 ಕನ್ನಡ
ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನಲೆ ಅಪರಾಧಿಗೆ ಮಂಡ್ಯ ಜಿಲ್ಲಾ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ತೀರ್ಪು ಪ್ರಕಟವಾಗಿದೆ.53 ವರ್ಷದ ಶಿವಣ್ಣ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ.2023 ಡಿಸೆಂಬರ್ 11ರಂದು ನಡೆದಿದ್ದ ಪ್ರಕರಣ.
3 ವರ್ಷದ ಬಾಲಕಿ ಮೇಲೆ ಎರಗಿದ್ದ ಕಾಮುಕ ಶಿವಣ್ಣ.ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ ಒಂದರಲ್ಲಿ ಘಟನೆ ನಡೆದಿತ್ತು.ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಪುಸಲಾಯಿಸಿ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದ ಅಲ್ಲದೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ.ಈ ಬಗ್ಗೆ ದೂರು ದಾಖಲು ಮಾಡಿದ ಪೊಲೀಸರು
ವಿಚಾರಣೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಆರೋಪಿ ವಿರುದ್ಧ ಸರ್ಕಾರಿ ವಕೀಲ ಹೆಬ್ಬಕವಾಡಿ ನಾಗರಾಜು ಮಾಡಿದ್ದರು.ವಾದ ಆಲಿಸಿದ ನ್ಯಾ.ದಿಲೀಪ್ ರಿಂದ ಶಿಕ್ಷೆ ಪ್ರಕಟ…