
ಫ್ರಾಡ್ ಮ್ಯೂಚುಯಲ್ ಫಂಡ್ ಕಂಪನಿಯಲ್ಲಿ ಷೇರ್ ಖರೀದಿ…ವೃದ್ದೆಗೆ 28.15 ಲಕ್ಷ ಪಂಗನಾಮ…
- Crime
- July 20, 2025
- No Comment
- 2
ಮೈಸೂರು,ಜು20,Tv10 ಕನ್ನಡ
ಲಾಭದ ಆಮಿಷ ತೋರಿಸಿ ಫ್ರಾಡ್ ಮ್ಯೂಚುಯಲ್ ಫಂಡ್ ಕಂಪನಿಯಿಂದ ಷೇರು ಖರೀದಿಸಿದ ಮೈಸೂರಿನ ವೃದ್ದೆಯೊಬ್ಬರು 28.15 ಲಕ್ಷ ಕಳೆದುಕೊಂಡಿದ್ದಾರೆ.ಮೈಸೂರು ವಿಜಯನಗರ ನಿವಾಸಿ ಭಾಗ್ಯಲಕ್ಷ್ಮಿ ಎಂಬುವರೇ ಹಣ ಕಳೆದುಕೊಂಡವರು.NJ groups original mutual fund company ಯಲ್ಲಿ ಹಂತ ಹಂತವಾಗಿ ಹಣ ಪಾವತಿಸಿ ಷೇರುಗಳನ್ನ ಖರೀದಿಸಿದ್ದಾರೆ.ನಂತರ ಲಾಭದ ಹಣ ಪಡೆಯವ ವೇಳೆ ಇದೊಂದು ಮೋಸದ ಕಂಪನಿ ಎಂದು ಗೊತ್ತಾಗಿದೆ.ಸೆನ್ ಪೊಲೀಸ್ ಠಾಣೆಯಲ್ಲಿ ಭಾಗ್ಯಲಕ್ಷ್ಮಿ ರವರು ಪ್ರಕರಣ ದಾಖಲಿಸಿದ್ದಾರೆ…