
ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನ ಕೊಲೆ…ಬೈಕ್ ನಿಂದ ಗುದ್ದಿ ಹತ್ಯೆ… ಬರ್ತ್ ಡೇ ಪಾರ್ಟಿ ಆಚರಣೆ ವೇಳೆ ಕೃತ್ಯ…
- CrimeMysore
- July 18, 2025
- No Comment
- 53

ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನ ಕೊಲೆ…ಬೈಕ್ ನಿಂದ ಗುದ್ದಿ ಹತ್ಯೆ… ಬರ್ತ್ ಡೇ ಪಾರ್ಟಿ ಆಚರಣೆ ವೇಳೆ ಕೃತ್ಯ…
ನಂಜನಗೂಡು,ಜು18,Tv10 ಕನ್ನಡ
ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನನ್ನ ಭೀಕರವಾಗಿ ಕೊಂದ ಘಟನೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.ಕೇವಲ ಫೋನ್ ರಿಸೀವ್ ಮಾಡಿದ್ದಕ್ಕೆ ಬೈಕ್ ನಲ್ಲಿ ಗುದ್ದಿ ಕೊಲೆ ಮಾಡಲಾಗಿದೆ.ಘಟನೆಗೆ ಸಂಭಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಸ್ನೇಹಿತರ ವಿರುದ್ದ ಪ್ರಕರಣ ದಾಖಲಾಗಿದ್ದು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಕೆಂಪಿಸಿದ್ದನಹುಂಡಿ ಗ್ರಾಮದ ವಸಂತ್ ಕುಮಾರ್,ಮಧುಸೂದನ್,ಚಂದ್ರು,ರವಿಚಂದ್ರ,ಸಿದ್ದರಾಜು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಕಿರಣ್ ಮೃತ ದುರ್ದೈವಿ.
15-07-2025 ರಂದು ಸ್ನೇಹಿತ ರವಿಚಂದ್ರನ್ ಹುಟ್ಟುಹಬ್ಬ ಇತ್ತು.ಕಿರಣ್ ಬರ್ತ್ ಡೇ ಪಾರ್ಟಿ ಆಚರಿಸಲು 5 ಮಂದಿ ಸ್ನೇಹಿತರ ಜೊತೆ ಹೊರಟ.ಹೆಜ್ಜಿಗೆ ಸೇತುವೆಯ ತೋಪಿನ ಬಳಿ 6 ಮಂದಿ ಸೇರಿ ಎಣ್ಣೆ ಪಾರ್ಟಿ ಶುರುಮಾಡಿದ್ರು.ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪದೂರ ಹೋದ.ಈ ವೇಳೆ ವಸಂತ್ ಫೋನ್ ರಿಂಗ್ ಆಗಿ ಕಿರಣ್ ರಿಸೀವ್ ಮಾಡಿದ.ರಶ್ಮಿ ಎಂಬಾಕೆಯಿಂದ ಫೋನ್ ಬಂದಿತ್ತು.ಯಾಕೆ ವಸಂತ್ ಮೊಬೈಲ್ ಗೆ ಫೋನ್ ಮಾಡಿದ್ದೀಯ ಎಂದು ಕಿರಣ್ ಪ್ರಶ್ನಿಸಿದ.ಕೆಲಸಮಯದ ನಂತರ ಮತ್ತೆ ರಶ್ಮಿಯಿಂದ ಬಂದ ಫೋನ್ ವಸಂತ್ ರಿಸೀವ್ ಮಾಡಿದಾಗ ಕಿರಣ್ ರಿಸೀವ್ ಮಾಡಿದ್ದ ವಿಚಾರ ಗೊತ್ತಾಯಿತು.ಇಷ್ಟಕ್ಕೇ ಇಬ್ಬರ ನಡುವೆ ಗಲಾಟೆ ಶುರುವಾಯ್ತು.ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿದ್ರು.ಸ್ಕೂಟರ್ ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ನಡೆಸಿ ಪರಾರಿಯಾದರು.ಮಾಹಿತಿ ಅರಿತ ಸಹೋದರ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಿದ.ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ.ಯುವತಿಯ ಫೋನ್ ರಿಸೀವ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಎನ್ನುವುದನ್ನ ಮರೆತು ಬರ್ತ್ ಡೇ ಪಾರ್ಟಿ ದಿನವೇ ಗೆಳೆಯನನ್ನ ಕೊಂದಿದ್ದಾರೆ.ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ…