
ಪೆಟ್ರೋಲ್ ಟ್ಯಾಂಕರ್ ಗೆ ಸರ್ಕಾರಿ ಬಸ್ ಢಿಕ್ಕಿ…5 ಮಂದಿ ಗಂಭೀರ…
- Crime
- August 2, 2025
- No Comment
- 93

ಪೆಟ್ರೋಲ್ ಟ್ಯಾಂಕರ್ ಗೆ ಸರ್ಕಾರಿ ಬಸ್ ಢಿಕ್ಕಿ…5 ಮಂದಿ ಗಂಭೀರ…

ನಂಜನಗೂಡು,ಆ2,Tv10 ಕನ್ನಡ
ಕೆಟ್ಟುನಿಂತಿದ್ದ ಪೆಟ್ರೋಲ್ ಟ್ಯಾಂಕರ್ ಗೆ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ 5 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡು ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಮಧ್ಯ ರಾತ್ರಿ ವೇಳೆ ಅಪಘಾತ ಸಂಭವಿಸಿದೆ. ನಂಜನಗೂಡು ಚಾಮರಾಜನಗರ ಮುಖ್ಯ ರಸ್ತೆಯ ದೊಡ್ಡ ಕವಲಂದೆಯ ಕೃಷ್ಣರಾಜಪುರ ಗ್ರಾಮದ HP ಪೆಟ್ರೋಲ್ ಬಂಕ್ ಬಳಿ kA05AL5022 ನೊಂದಣಿ ಸಂಖ್ಯ ಪೆಟ್ರೋಲ್ ಟ್ಯಾಂಕರ್ ಬಳಿ ಕೆಟ್ಟು ನಿಂತಿದ್ದು ಮೈಸೂರು ಕಡೆಯಿಂದ ಚಾಮರಾಜನಗರದ ಕಡೆಗೆ ಹೊರಟಿದ್ದ KSRTC KA10F0393 ನೊಂದಣಿಯ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ….