
ಶ್ರೀರಂಗಪಟ್ಟಣ ಎಡಿಎಲ್ಆರ್ ಆಗಿ ಮಹಮದ್ ಹುಸೇನ್ ಅಧಿಕಾರ ಸ್ವೀಕಾರಅಧಿಕಾರ ಸ್ವೀಕರಿಸುತ್ತಿದ್ದಂತೆ ಭೂಮಾಪಕರಿಗೆ ಖಡಕ್ ಸೂಚನೆ
- TV10 Kannada Exclusive
- August 2, 2025
- No Comment
- 456

ಶ್ರೀರಂಗಪಟ್ಟಣ ಎಡಿಎಲ್ಆರ್ ಆಗಿ ಮಹಮದ್ ಹುಸೇನ್ ಅಧಿಕಾರ ಸ್ವೀಕಾರ
ಅಧಿಕಾರ ಸ್ವೀಕರಿಸುತ್ತಿದ್ದಂತೆ ಭೂಮಾಪಕರಿಗೆ ಖಡಕ್ ಸೂಚನೆ
ಶ್ರೀರಂಗಪಟ್ಟಣ :TV10KANNADA. 2/8/2025
ಶ್ರೀರಂಗಪಟ್ಟಣ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಮಹಮಸ್ ಹುಸೇನ್ ನೂತನವಾಗಿ ನೇಮಕಗೊಂಡಿದ್ದು, ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಎಡಿಎಲ್ಆರ್ ಆಗಿದ್ದ ಬಿ.ಇ.ಮೇಘ ಅವರು ವರ್ಗಾವಣೆಗೊಂಡ ಕಾರಣ ಅವರ ಸ್ಥಳಕ್ಕೆ ಮಹಮದ್ ಹುಸೇನ್ ನೇಮಕಗೊಂಡಿದ್ದರು. ಹುಸೇನ್ ಅಧಿಕಾರ ಸ್ವೀಕಾರ ವೇಳೆ ಸರ್ವೆ ತಪಾಸಕಾರ ಮಂಜುನಾಥ್, ಸುರೇಶ್, ಯೋಗರಾಜ್ ಹಾಗೂ ಭೂಮಾಪಕರು ಹಾಜರಿದ್ದರು.
ಎಡಿಎಲ್ಆರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನಯಾದವ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಭೂಮಾಪಕರ ಸಭೆ ನಡೆಸಿ, ಸಾರ್ವಜನಿಕರ ಕೆಲಸವನ್ನು ಸಕಾಲದಲ್ಲಿ ಪೂರೈಸಿ, ಆಶ್ರಯ ಯೋಜನೆ ಕೆಲಸಗಳು, ದರಖಾಸ್ತು ಪೋಡಿ ಪ್ರಕರಣಗಳು ಹಾಗೂ ಮೋಜಿಣಿ ಪ್ರಕರಣಗಳನ್ನು ಸಕಾಲದಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು.