
YONO application ಡೌನ್ ಲೋಡ್ ಮಾಡಿದ ಒಂದು ಗಂಟೆಗೆ 98 ಸಾವಿರ ಉಂಡೆನಾಮ…
- TV10 Kannada Exclusive
- August 4, 2025
- No Comment
- 146




ಮೈಸೂರು,ಆ4,Tv10 ಕನ್ನಡ
SBI ಬ್ಯಾಂಕ್ ನ YONO APPLICATION ಡೌನ್ ಲೋಡ್ ಮಾಡಿದ ಖಾಸಗಿ ಕಂಪನಿ ಉದ್ಯೋಗಿಗೆ 98,800/- ರೂ ವಂಚಿಸಿದ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬಸವೇಶ್ವರ ಬ್ಲಾಕ್ ನ ನಿವಾಸಿ ಆಟೋಮೋಟಿವ್ ಆಕ್ಸಲ್ ನಲ್ಲಿ ಎಕ್ಸಿಕ್ಯುಟಿವ್ ಮ್ಯಾನೇಜರ್ ಆಗಿರುವ ಸುರೇಶ್ ಎಂಬುವರೇ ಹಣ ಕಳೆದುಕೊಂಡವರು.
ವಾಟ್ಸಾಪ್ ನಲ್ಲಿ YONO application ಡೌನ್ ಲೋಡ್ ಮಾಡಿಕೊಳ್ಳುವಂತೆ ಮೆಸೇಜ್ ಬಂದಿದೆ.ಸಂಜೆ 5 ಗಂಟೆ ವೇಳೆಗೆ ಅಪ್ಲಿಕೇಷನ್ ಡೌನ್ ಲೋಡ್ ಮಾಡಿದ್ದಾರೆ.ಕೇವಲ 1 ಗಂಟೆ ಅವಧಿಗೆ ಅಂದ್ರೆ 6 ಗಂಟೆ ವೇಳೆಗೆ 90,000/- ಹಾಗೂ 9800/- ರೂ ವರ್ಗಾವಣೆ ಆಗಿದೆ.ಕೂಡಲೇ ಪರಿಶೀಲಿಸಿದಾಗ ಫೇಕ್ YONO ಅಪ್ಲಿಕೇಷನ್ ಎಂದು ಖಚಿತವಾಗಿದೆ.ಈ ಸಂಭಂಧ ಸುರೇಶ್ ರವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…