
ಯುವತಿ ಹೆಸರಲ್ಲಿ ಫೇಕ್ ಇನ್ಸ್ಟಾಗ್ರಾಂ ಖಾತೆ ಓಪನ್…ಅಶ್ಲೀಲ ಸಂದೇಶ,ಚಿತ್ರಗಳು, ವಿಡಿಯೋ ಪೋಸ್ಟ್ ಮಾಡಿದ ಯುವಕನ ವಿರುದ್ದ FIR…
- TV10 Kannada Exclusive
- August 4, 2025
- No Comment
- 62
ಮೈಸೂರು,ಆ4,Tv10 ಕನ್ನಡ
ಯುವತಿ ಹೆಸರಲ್ಲಿ ಎರಡು ಫೇಕ್ ಇನ್ಸ್ಟಾಗ್ರಾಂ ಖಾತೆ ಓಪನ್ ಮಾಡಿ ಅಶ್ಲೀಲ ಸಂದೇಶ ಚಿತ್ರಗಳು ಖಾಸಗಿ ವಿಡಿಯೋ ಪೋಸ್ಟ್ ಮಾಡಿರುವ ಯುವಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ 21 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದಾಳೆ.ಯಶ್ವಂತ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಒಂದು ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಫೋಟೋ ಹಾಕಿ ಅಶ್ಲೀಲ ಸಂದೇಶ್ ಪೋಸ್ಟ್ ಮಾಡಿ ಪಬ್ಲಿಕ್ ವೀಕ್ಷಣೆಗೆ ಇಟ್ಟಿದ್ದಾನೆ.ಮತ್ತೊಂದ ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಖಾಸಗಿ ಚಿತ್ರಗಳನ್ನ ಹಾಗೂ ವಿಡಿಯೋಗಳನ್ನ ಪೋಸ್ಟ್ ಮಾಡಿ ಖಾಸಗಿ ಜೀವನಕ್ಕೆ ಧಕ್ಕೆ ತಂದಿದ್ದಾನೆಂದು ನೊಂದ ಯುವತಿ ಆರೋಪಿಸಿದ್ದಾಳೆ…