
ದೇವಮಾನವನ ಹೆಸರಲ್ಲಿ ವಂಚನೆ…2.19 ಕೋಟಿ…200 ಗ್ರಾಂ ಚಿನ್ನಾಭರಣ ಲಪಟಾಯಿಸಿದ ಖದೀಮರು…ದಂಪತಿ ವಿರುದ್ದ FIR…
- TV10 Kannada Exclusive
- August 5, 2025
- No Comment
- 149
ಮೈಸೂರು,ಆ5,Tv10 ಕನ್ನಡ
ಮೈಮೇಲೆ ದೇವರು ಬರುತ್ತದೆ,ನಾನೊಬ್ಬ ದೇವ ಮಾನವ,ಹತ್ತಾರು ದೇವರುಗಳು ಒಲಿದಿದೆ ಇನ್ನೊಬ್ಬರ ಕಷ್ಟ ಸುಖಗಳಿಗೆ ಸಹಾಯ ಮಾಡದಿದ್ದರೆ ನಿಮ್ಮ ಕುಟುಂಬ ಸಂಕಷ್ಟದಲ್ಲಿ ಸಿಲುಕುತ್ತದೆ ಎಂದು ಭೀತಿ ಹುಟ್ಟಿಸಿದ ದಂಪತಿ ಮೈಸೂರಿನ ನಿವಾಸಿಯೊಬ್ಬರಿಗೆ 2,19,35,872/- ರೂ ಹಾಗೂ 202 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ದಕ್ಷಿಣ ಕನ್ನಡ ದ ದಂಪತಿ ರೂಪಶ್ರೀ ಕುಮಾರ್ ಹಾಗೂ ಪತಿ ಸಂದೇಶ್ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಮೈಸೂರಿನ ಜೆಎಸ್ ಎಸ್ ಲೇಔಟ್ ನಿವಾಸಿ ಅರುಣ್ ಕುಮಾರ್ (54) ಎಂಬುವರೇ ವಂಚನೆಗೆ ಒಳಗಾದವರು.ಪ್ರಕರಣದ ಪ್ರಮುಖ ಅಂಶವೆಂದರೆ ಕೇವಲ ವಾಟ್ಸಾಪ್ ನ್ನೇ ಬಳಸಿ ವಂಚಿಸಿರುವುದು ವಿಶೇಷ.
2017 ರಲ್ಲಿ ವಾಟ್ಸಾಪ್ ರೂಪಶ್ರೀ ಕುಮಾರ್ ರವರು ಅರುಣ್ ಕುಮಾರ್ ರವರನ್ನ ಸಂಪರ್ಕಿಸಿದ್ದಾರೆ.ಅಪ್ಪಾಜಿ ಎಂಬ ದೇವಮಾನವನ ಹೆಸರೇಳಿ ಅರುಣ್ ಕುಮಾರ್ ರವರನ್ನ ನಂಬಿಸಿದ್ದಾರೆ.ಅಪ್ಪಾಜಿ ರವರು ಹಿಮಾಲಯ ಹಾಗೂ ಕೇರಳಾದಲ್ಲಿ ತಪಸ್ಸು ಮಾಡಿದ್ದಾರೆ.ಇವರು ನಮ್ಮ ಅಜ್ಜಿಗೆ ಇದ್ದ ಕ್ಯಾನ್ಸರ್ ಗುಣಪಡಿಸಿದ್ದಾರೆಂದು ನಂಬಿಸಿದ್ದಾರೆ.ಇವರ ಮಾತನ್ನ ನಂಬಿದ ಅರುಣ್ ಕುಮಾರ್ ಮತ್ತಷ್ಟು ಸ್ನೇಹ ಬೆಳೆಸಿದ್ದಾರೆ.ನೀವು ಕೆಲಸಕ್ಕೆ ತೆರಳುವ ಸಂಧರ್ಭದಲ್ಲಿ ಆಕ್ಸಿಡೆಂಟ್ ಆಗುತ್ತದೆ ಇದರಿಂದ ತಪ್ಪಿಸಿಕೊಳ್ಳಬೇಕಿದ್ದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದೇ ಪರಿಹಾರ ಎಂದು ಅಪ್ಪಾಜಿ ಮೂಲಕ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ.ಇದನ್ನೂ ನಂಬಿದ ಅರುಣ್ ಕುಮಾರ್ ಹಣ ಪಾವತಿಸಿದ್ದಾರೆ.ಅಪ್ಪಾಜಿ ರವರು ದೇವಮಾನವ ಇವರ ಮೈಮೇಲೆ ರಾಘವೇಂದ್ರ ಸ್ವಾಮಿ,ಲಕ್ಷ್ಮಿ,ಕೊಡಗಜ್ಜ,ಮಂಜುನಾಥ್ ಸ್ವಾಮಿ,ಸುಭ್ರಹ್ಮಣ್ಯೇಶ್ವರ,ಗೌರಿ ಹಾಗೂ ಇತರ ದೇವರುಗಳು ಬರುತ್ತದೆ ಎಂದು ತಿಳಿಸಿದ್ದಾರೆ.ಸಂದೇಶ್ ಮೈಮೇಲೆ ದೇವರು ಬಂದಿರುವ ವಿಡಿಯೋಗಳನ್ನ ಅರುಣ್ ಕುಮಾರ್ ಗೆ ರವಾನೆಯಾಗಿದೆ.ನೀವು ಜರ್ಮನಿಗೆ ಹೋಗುತ್ತೀರ ಎಂದು ಅಪ್ಪಾಜಿ ಭವಿಷ್ಯ ನುಡಿದಿದ್ದಾರೆ.ಅಂತೆಯೇ ಕಾಕತಾಳೀಯವೆಂಬಂತೆ ಅರುಣ್ ಕುಮಾರ್ ಪತ್ನಿ ಜರ್ಮನಿಗೆ ತೆರಳಿದ್ದಾರೆ.ನಂತರ ಅರುಣ್ ಕುಮಾರ್ ಹಾಗೂ ಮಗ ಸಹ ಜರ್ಮನಿಗೆ ತೆರಳಿದ್ದಾರೆ.ಅಲ್ಲಿಂದ ಅರುಣ್ ಕುಮಾರ್ ಮೇಲೆ ಮತ್ತಷ್ಟು ನಂಬಿಕೆ ಹುಟ್ಟಿಸುವಂತಹ ಸನ್ನಿವೇಶಗಳು ಸೃಷ್ಠಿಯಾಗಿದೆ.ಮತ್ತೊಬ್ಬರ ಕಷ್ಟ ಪರಿಹಾರ ಮಾಡಲು ನೀವು ಹಣ ಕೊಡದಿದ್ರೆ ನಿಮ್ಮ ಕುಟುಂಬಕ್ಕೆ ಸಂಕಷ್ಟ ಎದುರಾಗುತ್ತದೆ ಎಂದು ಭೀತಿ ಹುಟ್ಟಿಸಿ ಹಂತಹಂತವಾಗಿ 2,19,35,872/- ರೂ ಗಳನ್ನ ವಿವಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ಅಲ್ಲದೆ ಧಾರ್ಮಿಕ ಕಾರ್ಯಗಳ ಹೆಸರೇಳಿ 202 ಗ್ರಾಂ ಚಿನ್ನಾಭರಣ ಸಹ ಪಡೆದಿದ್ದಾರೆ.
2024 ರಲ್ಲಿ ಅಪ್ಪಾಜಿ ರವರನ್ನ ಭೇಟಿ ಮಾಡಬೇಕು ಎಂದು ಒತ್ತಡ ಹೇರಿದಾಗ ಅಪ್ಪಾಜಿ ಮೃತಪಟ್ಟಿದ್ದಾರೆ.ಈಗ ಅಪ್ಪಾಜಿ ಮೈ ಮೇಲೆ ಬರುತ್ತಿಲ್ಲ ಎಂದು ಹೇಳಿದ್ದಾರೆ.ಇವರ ವರ್ತನೆ ಮೇಲೆ ಅನುಮಾನಗೊಂಡ ಅರುಣ್ ಕುಮಾರ್ ಗಂಭೀರವಾಗಿ ದಂಪತಿಯನ್ನ ಪ್ರಶ್ನಿಸಿದಾಗ ದೇವಮಾನವ ಅಪ್ಪಾಜಿ ಎಂಬ ಹೆಸರಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.ದಂಪತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ….