
ಫೇಕ್ ಲಿಂಕ್ ಕಳಿಸಿ ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಂಡು 1.98 ಲಕ್ಷ ಹಣ ವರ್ಗಾವಣೆ…ವಂಚಕನ ವಿರುದ್ದ FIR…
- TV10 Kannada Exclusive
- August 5, 2025
- No Comment
- 38
ಮೈಸೂರು,ಆ5,Tv10 ಕನ್ನಡ
ಫೇಕ್ ಲಿಂಕ್ ಕಳಿಸಿ ಮೊಬೈಲ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬೆದರಿಸಿ ಬ್ಯಾಂಕ್ ಖಾತೆಯಿಂದ 1.98 ಲಕ್ಷ ಹಣ ಮೋಸದಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶ್ರೀರಾಂಪುರ ನಿವಾಸಿ ಜಮುನಾರಾಣಿ ಎಂಬುವರು ಹಣ ಕಳೆದುಕೊಂಡವರು.ಜ್ಯೋತಿಷ್ಯದ ಬಗ್ಗೆ ನಿತ್ಯಕುಂಡಲಿ ಪುಸ್ತಕ ಖರೀದಿಸುವ ಸಲುವಾಗಿ ಜಮುನಾರಾಣಿ ರವರು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಗೌರಿಶಂಕರ ಬುಕ್ ಡಿಪೋ ಕಂಡುಬಂದಿದೆ.ಇದರಲ್ಲಿ ನಮೂದಾಗಿದ್ದ ಮೊಬೈಲ್ ನಂಬರ್ ಗೆ ಫೋನ್ ಮಾಡಿ ನಿತ್ಯಕುಂಡಲಿ ಪುಸ್ತಕದ ಬಗ್ಗೆ ಕೇಳಿದಾಗ ಲಭ್ಯವಿದೆ ಎಂದು ವ್ಯಕ್ತಿ ಉತ್ತರಿಸಿದ್ದಾನೆ.ಇದೇ ವೇಳೆ ವ್ಯಕ್ತಿ ಎಪಿಕೆ ಫೈಲ್ ಕಳಿಸಿದ್ದಾನೆ.ಆಕಸ್ಮಿಕವಾಗಿ ಫೈಲ್ ಓಪನ್ ಆಗಿದೆ.ಕೆಲವೇ ಕ್ಷಣಗಳಲ್ಲಿ ಇದು ಫ್ರಾಡ್ ಎಂದು ಖಚಿತವಾದಾಗ ಕಾಲ್ ಕಟ್ ಮಾಡಲು ಯತ್ನಿಸಿದರೂ ಕಟ್ ಆಗಿಲ್ಲ.ಈ ವೇಳೆ ಜುಮುನಾರಾಣಿ ರವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಫೇಕ್ ಮೆಸೇಜ್ ಬಂದಿದೆ.ಮಾತನಾಡುತ್ತಿದ್ದ ವ್ಯಕ್ತಿ ಹಣ ಹಿಂದಕ್ಕೆ ಬರಬೇಕಂದ್ರೆ ನಾನು ಹೇಳಿದ ಹಾಗೆ ಕೇಳಬೇಕೆಂದು ಬೆದರಿಸಿದ್ದಾನೆ.ವಂಚಕ ಹೇಳಿದಂತೆ ಮಾಡಿದಾಗ ಎರಡು ಖಾತೆಗಳಿಂದ ತಲಾ 99,000/- ರೂ ಒಟ್ಟು 1,98,000/- ಡ್ರಾ ಆಗಿದೆ.ಎಷ್ಟೇ ಪ್ರಯತ್ನ ಪಟ್ಟರೂ ಕಾಲ್ ಮಾತ್ರ ಕಟ್ ಆಗಿಲ್ಲ.ನಂತರ ಜಮುನಾರಾಣಿ ರವರು ಮೊಬೈಲ್ ಸ್ವಿಚ್ ಆಫ್ ಮಾಡಿ 1930 ಕ್ಕೆ ಕರೆ ಮಾಡಿದ್ದಾರೆ.ಮೊಬೈಲ್ ಅನ್ನು ತನ್ನ ಕಂಟ್ರೋಲ್ ಗೆ ತೆಗೆದುಕೊಂಡು ಫೇಕ್ ಲಿಂಕ್ ಹಾಕಿ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡ ವಂಚಕನ ವಿರುದ್ದ ಜಮುನಾರಾಣಿ ರವರು ಪ್ರಕರಣ ದಾಖಲಿಸಿದ್ದಾರೆ…