
ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?
- TV10 Kannada Exclusive
- August 6, 2025
- No Comment
- 57
ಹಳೇ ಧ್ವೇಷ…ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ…ಧ್ವೇಷಕ್ಕೆ ಕಾರಣ ಏನು ಗೊತ್ತಾ…?
ಮೈಸೂರು,ಆ6,Tv10 ಕನ್ನಡ
ಹಳೇ ಧ್ವೇಷದ ಹಿನ್ನಲೆ ಕ್ಯಾಬ್ ಡ್ರೈವರ್ ಮೇಲೆ ಆಟೋ ಡ್ರೈವರ್ ಹಲ್ಲೆ ನಡೆಸಿದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಯಲ್ಲಿ ನಡೆದಿದೆ.ಈ ವೇಳೆ ನೆರವಿಗೆ ಬಂದ ಕ್ಯಾಬ್ ಡ್ರೈವರ್ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ.ಹಲ್ಲೆಗೊಳಗಾದ ದಂಪತಿ ಆಟೋ ಡ್ರೈವರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಳೇ ಧ್ವೇಷಕ್ಕೆ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ.
ಕ್ಯಾಬ್ ಡ್ರೈವರ್ ಪುರುಶೋತ್ತಮ್ ಹಾಗೂ ಇವರ ಪತ್ನಿ ಸುನಿತಾ ಹಲ್ಲೆಗೊಳಗಾದವರು.ಆಟೋ ಡ್ರೈವರ್ ವಿಜಯಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.ವಿಜಯ್ ಕುಮಾರ್ ಪತ್ನಿ ಎರಡು ವರ್ಷಗಳ ಹಿಂದೆ ಪುರುಷೋತ್ತಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ಲು.ಈ ವೇಳೆ ವಿಜಯ್ ಕುಮಾರ್ ಪತ್ನಿ ಮತ್ತೊಬ್ಬನ ಜೊತೆ ಓಡಿಹೋದಳು.ಇದಕ್ಕೆ ಕಾರಣ ಪುರುಷೋತ್ತಮ್ ಎಂದು ವಿಜಯಕುಮಾರ್ ಧ್ವೇಷ ಬೆಳೆಸಿಕೊಂಡ.ನಿನ್ನೆ ರಿಯೋಮೆರಿಡಿಯನ್ ಬಳಿ ಕ್ಯಾಬ್ ನಲ್ಲಿ ಗ್ರಾಹಕರೊಬ್ಬರನ್ನ ಕರೆತಂದ ಪುರುಷೋತ್ತಮ್ ಡ್ರಾಪ್ ಮಾಡಿ ಕಾದಿದ್ದರು.ಈ ವೇಳೆ ಅಲ್ಲಿಗೆ ಬಂದ ವಿಜಯ್ ಕುಮಾರ್ ಇಲ್ಲಿ ಯಾಕೋ ಗಾಡಿ ಹಾಕಿದ್ದೀಯ ಎಂದು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾನೆ.ವಿಜಯ್ ಕುಮಾರ್ ಗೆ ಸ್ನೇಹಿತ ಸಾಥ್ ನೀಡಿದ್ದಾನೆ.ಈ ಮಾಹಿತಿ ತಿಳಿದ ಪತ್ನಿ ಸ್ಥಳಕ್ಕೆ ಬಂದಿದ್ದಾರೆ.ಸುನಿತಾ ಮೇಲೂ ಹಲ್ಲೆ ನಡೆದಿದೆ.ಚಿಕಿತ್ಸೆ ಪಡೆದ ದಂಪತಿ ಹಲ್ಲೆ ನಡೆಸಿದ ವಿಜಯ್ ಕುಮಾರ್ ಮೇಲೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.